ಮೈಸೂರು: ನಗರ ಮತ್ತು ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಉದ್ಘಾಟನೆ ಶನಿವಾರ ನಡೆಯಿತು.
ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ಕೆವಿಆರ್ ವೆಡ್ಡಿಂಗ್ ಬೆಲ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಆರ್. ಇನಾಂದಾರ್ ಉದ್ಘಾಟಿಸಿದರು.
ನಂತರ ಮಾತನಾಡಿ, ‘ಪತ್ರಬರಹಗಾರರು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮತ್ತು ಇಲಾಖೆಗೆ ಹೆಚ್ಚು ರಾಜಸ್ವ ಬರುವಂತೆ ಕೆಲಸ ಮಾಡಬೇಕು’ ಎಂದರು.
‘ಕಾನೂನು ಚೌಕಟ್ಟಿನಲ್ಲಿ ಪತ್ರ ಬರೆಯಬೇಕಾದರೆ ಸರಿಯಾದ ಮಾಹಿತಿ ಇರಬೇಕಾಗುತ್ತದೆ. ಪತ್ರವನ್ನು ಪಡೆದ ವ್ಯಕ್ತಿಗೆ ಮುಂದೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು; ಆಗ ಬಹಳ ಅನುಕೂಲವಾಗುತ್ತದೆ. ಯಾವುದೇ ಹೊಸ ದಾಖಲೆ ಬಂದರೂ ಅದರ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು. ಸ್ಟ್ಯಾಂಪ್ ಡ್ಯೂಟಿ ಬಗ್ಗೆಯೂ ಮಾಹಿತಿ ಹೊಂದಿರಬೇಕು’ ಎಂದು ಸಲಹೆ ನೀಡಿದರು.
‘ಮೈಸೂರಿನಲ್ಲಿ ಸಾಕಷ್ಟು ಹಿರಿಯ ಅಧಿಕಾರಿಗಳಿದ್ದು, ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು’ ಎಂದರು.
ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ಉಪ ನೋಂದಣಾಧಿಕಾರಿಗಳಾದ ಎಚ್.ಕೆ. ನಾಗರಾಜ್ (ಪೂರ್ವ), ನಂದಿನಿ ಸಿ.ಪಿ. (ಉತ್ತರ), ಷಾಜಹ ಎಸ್.ಕೆ. (ದಕ್ಷಿಣ), ಉಪ ನೋಂದಣಾಧಿಕಾರಿಗಳಾದ ಶ್ರೀಕಾಂತ್ ಎನ್. (ಪಶ್ಚಿಮ), ಯಶಸ್ವಿನಿ ಜೆ. (ದಕ್ಷಿಣ), ರುಕ್ಮಿಣಿ ವಿ. (ಮುಡಾ), ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೋಡಲ್ ಅಧಿಕಾರಿ ಸಂತೋಷ್ ಕುಮಾರ್ ಎಂ., ವಿವೇಕ್ ಎಂ., ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್. ಧನಂಜಯ್, ಕಾರ್ಯದರ್ಶಿ ಕೆ.ಆರ್. ಉದಯ್ ಕುಮಾರ್, ಖಜಾಂಚಿ ಎಂ.ಎಸ್. ನರಸಿಂಹಮೂರ್ತಿ, ಸಂಚಾಲಕ ಎಂ. ಗಣೇಶ್, ನಿರ್ದೇಶಕರಾದ ಕೆ.ಆರ್. ಸತ್ಯನಾರಾಯಣ್, ಎಸ್.ಎನ್. ದೇವರಾಜು, ನಾಗಭೂಷಣ್ ಆರಾಧ್ಯ ಎ.ಎಸ್., ಮಹದೇವ ಜಿ., ಬಿ. ಕುಮಾರ್, ಫಣಿರಾಜ್ ಎಸ್., ಚಂದ್ರಶೇಖರ್, ಎಸ್.ಎನ್. ದಿನೇಶ್ ಕುಮಾರ್, ಎಸ್.ಎಸ್. ವೇಣು, ಜಯಲಕ್ಷ್ಮಿ ಬಿ. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.