
ಪ್ರಜಾವಾಣಿ ವಾರ್ತೆಮೈಸೂರು: ‘ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನನಗಿನ್ನೂ ನಿವಾಸ ನೀಡಿಲ್ಲ. ನನಗೆ ನಿವಾಸ ನೀಡಿದ ದಿನವೇ ವಾಸ ಆರಂಭಿಸುವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
‘ಆಷಾಢ ಶುಕ್ರವಾರ, ಅಮಾವಾಸ್ಯೆ ಎಂದೆಲ್ಲಾ ದಿನ ನೋಡಿ ವಾಸ ಆರಂಭಿಸುವ ಅಗತ್ಯ ನನಗಿಲ್ಲ. ನನಗೆ ಎಲ್ಲ ದಿನಗಳೂ ಒಂದೇ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ದಿನ ನೋಡಿ ಗೃಹ ಪ್ರವೇಶ ಮಾಡುವವರು ಯಾರೋ ನನಗೆ ಗೊತ್ತಿಲ್ಲ. ಅದು ಅವರವರ ನಂಬಿಕೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.