ADVERTISEMENT

ಮೈಸೂರು: ಆನ್‌ಲೈನ್‌ ಮೂಲಕ ₹1.77 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:15 IST
Last Updated 8 ಜನವರಿ 2026, 4:15 IST
<div class="paragraphs"><p>ವಂಚನೆ: ದೂರು</p></div>

ವಂಚನೆ: ದೂರು

   

ಮೈಸೂರು: ಆನ್‌ಲೈನ್‌ ಹೂಡಿಕೆ ಮಾಡುವ ಆಸೆಯಿಂದಾಗಿ ಜೆ.ಪಿ ನಗರದ ನಿವಾಸಿಯೊಬ್ಬರು ₹ 1.77 ಕೋಟಿ ವಂಚನೆಗೊಳಗಾಗಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಗ್ನಾನಂದ ಶರ್ಮಾ ಎಂಬಾತ ವಾಟ್ಸ್‌ಆ್ಯಪ್ ಗುಂಪು ರಚಿಸಿ, ಷೇರು ಮಾರುಕಟ್ಟೆ ಕುರಿತು ತರಬೇತಿ ನೀಡಿದ್ದರು. ನಂತರ ಹೆಚ್ಚಿನ ಲಾಭ ತಂದುಕೊಡುವುದಾಗಿ ನಂಬಿಸಿ ಮೀರಾ ಎಂಬ ಮಹಿಳೆಯನ್ನು ಪರಿಚಯಿಸಿದ್ದರು. ಆಕೆ ತಾನು ಪೋಲೆನ್‌ ಕ್ಯಾಪಿಟಲ್‌ ಸಂಸ್ಥೆಯ ಪ್ರತಿನಿಧಿ ಹಾಗೂ ಭಾರತೀಯ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ಅರ್ಹ ಸಾಂಸ್ಥಿಕ ಶೇರು ಖರೀದಿದಾರರೆಂದು ಹೇಳಿಕೊಂಡಿದ್ದರು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ADVERTISEMENT

‘ವಿದೇಶಿ ಸಂಸ್ಥೆಗಳು ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಲು ಸಾಧ್ಯವಿಲ್ಲದ್ದರಿಂದ ವಿವಿಧ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತೆ ಮಹಿಳೆ ತಿಳಿಸಿದ್ದರು. ಅದರಂತೆ ಡಿ.30ರೊಳಗೆ ಆರ್‌ಟಿಜಿಎಸ್ ಮೂಲಕ ವಿವಿಧ ಖಾತೆಗಳಿಗೆ ₹ 1.77 ಕೋಟಿ ಹಣ ವರ್ಗಾಯಿಸಿದ್ದೇನೆ. ಆ್ಯಪ್‌ನಲ್ಲಿ ₹15.45 ಕೋಟಿ ಲಾಭ ತೋರಿಸುತ್ತಿತ್ತು. ಹಣ ಪಡೆಯಲು ಪ್ರಯತ್ನಿಸಿದಾಗ ಹಣ ದೊರಕಲಿಲ್ಲ’ ಎಂದು ದೂರುದಾರರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.