ADVERTISEMENT

ಜನ ಮನ ಸೆಳೆದ ವಚನ‌ ಸಾಹಿತ್ಯ: ಗೌರಿಶಂಕರ ಸ್ವಾಮೀಜಿ‌

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:54 IST
Last Updated 13 ಮೇ 2025, 14:54 IST
ತಿ.ನರಸೀಪುರ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ದಿಂದ ಬಸವ ಜಯಂತಿ‌ ಆಚರಣೆ ಸೋಮವಾರ ನಡೆಯಿತು
ತಿ.ನರಸೀಪುರ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ದಿಂದ ಬಸವ ಜಯಂತಿ‌ ಆಚರಣೆ ಸೋಮವಾರ ನಡೆಯಿತು   

ತಿ.ನರಸೀಪುರ: ಬಸವಾದಿ ಶರಣರು ಕೊಟ್ಟ ವಚನ ಸಾಹಿತ್ಯಕ್ಕೆ ಎಲ್ಲರೂ‌ ಮಾರು ಹೋಗಿದ್ದು, ವಚನಗಳಿಲ್ಲದೇ  ಕಾರ್ಯಕ್ರಮಗಳು ಪೂರ್ಣವಾಗುತ್ತಿಲ್ಲ ಎಂದು  ತಾಲ್ಲೂಕಿನ ಮದ್ಗಾರ ಲಿಂಗಯ್ಯನ ಹುಂಡಿ ಮಠದ ಪೀಠಾಧ್ಯಕ್ಷ ಗೌರಿಶಂಕರ ಸ್ವಾಮೀಜಿ‌ ಹೇಳಿದರು.

ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ, ‘ವಚನ ದರ್ಶನ ಮಿಥ್–ಸತ್ಯ’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12 ನೇ ಶತಮಾನದಲ್ಲಿ  ಬಸವಣ್ಣರವರು ಶಿಕ್ಷಣಕ್ಕೆ ಒತ್ತು ನೀಡಿದ ಅನೇಕರಿಗೆ ಶಿಕ್ಷಣ ಪಡೆಯುವ ಅವಕಾಶ ಲಭಿಸಿತು ಎಂದರು.

 ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ರವಿ ಮಾತನಾಡಿ, ಅನುಭವ ಮಂಟಪದ ಮೂಲಕ‌ ಸಮಾಜ ಸುಧಾರಣೆಗೆ  ಮುನ್ನುಡಿ ಬರೆದ ಬಸವಣ್ಣ  ಮಾನವೀಯತೆ ದೊಡ್ಡದು ಎಂಬುದನ್ನು ಮನುಕುಲಕ್ಕೆ ಸಾರಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಮಾನತೆಗೆ ಶ್ರಮಿಸಿದ್ದಾರೆ. ಅವರ ವಚನಗಳು  ಸಮ ಸಮಾಜದ ಸಂದೇಶ ನೀಡಿವೆ ಎಂದರು.

ADVERTISEMENT

 ಮಹಾಸಭಾದ ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಶರಣ ಮಹದೇವಪ್ಪ ಮಾತನಾಡಿದರು.  ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ, ಟಿ.ಎನ್. ನಾಗರಾಜು, ಅಕ್ಕಮಹಾದೇವಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ. ಜಿ. ಶಿವಪ್ರಸಾದ್, ಕಾರ್ಯದರ್ಶಿ ಬಿ.ಎಂ.ಮರಪ್ಪ, ಬಸವ ತತ್ವದ ಪ್ರಚಾರಕ ಚೌಹಳ್ಳಿ ಲಿಂಗರಾಜು,  ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಮಹದೇವಪ್ಪ, ಜ್ಯೋತಿ ಪರಮೇಶ್ ಪಟೇಲ್, ಕುರುಬೂರು ಜಗದೀಶ್, ಕು.ಶಿ. ಬೃಂಗೇಶ್, ಡಿ.ಎಲ್. ಮಹದೇವಪ್ಪ, ಬೆನಕನಹಳ್ಳಿ ವಿಜಯಕುಮಾರ್,ಲತಾ, ವಕೀಲ ಜ್ಞಾನೇಂದ್ರ ಮೂರ್ತಿ, ಕೆಬ್ಬೆಹುಂಡಿ ಸೋಮಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.