ADVERTISEMENT

ವಿಜಯದಶಮಿ ಮೆರವಣಿಗೆಗೆ ಸಿದ್ಧತೆ

ಅರಮನೆ ಆವರಣ ಪರಿಶೀಲಿಸಿದ ಪೊಲೀಸ್‌ ಕಮಿಷನರ್ ಡಾ.ಚಂದ್ರಗುಪ್ತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:10 IST
Last Updated 25 ಅಕ್ಟೋಬರ್ 2020, 8:10 IST
ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿಯಾಗಿ ಶನಿವಾರ ಅರಮನೆ ಆವರಣದಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನೇ ಹೋಲುವ ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿ ಅಂತಿಮತಾಲೀಮು ನಡೆಸಿತು
ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿಯಾಗಿ ಶನಿವಾರ ಅರಮನೆ ಆವರಣದಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನೇ ಹೋಲುವ ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿ ಅಂತಿಮತಾಲೀಮು ನಡೆಸಿತು   

ಮೈಸೂರು:ಭಾನುವಾರದಆಯುಧ ಪೂಜೆ ಸಡಗರ ಮುಗಿದರೆ ಮರುದಿನವೇ ವಿಜಯ ದಶಮಿ ಸಂಭ್ರಮ. ಈ ಬಾರಿ ಜಂಬೂ ಸವಾರಿಯು ಅರಮನೆ ಆವರಣಕ್ಕೆ ಸೀಮಿತ ಗೊಂಡಿದ್ದು,ಮೊದಲ ಬಾರಿ ಅಭಿಮನ್ಯು ಆನೆಯು 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿದೆ.ಕೇವಲ ಎರಡು ಸ್ತಬ್ಧಚಿತ್ರಗಳ ಪ್ರದರ್ಶನವಿದೆ.

ಅರಮನೆ ಆವರಣದಲ್ಲಿ300 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಇವರಲ್ಲಿ ಕಲಾವಿದರು, ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಪೊಲೀಸರೇ ಇರಲಿದ್ದಾರೆ. ಜಿಲ್ಲಾಡಳಿತವು ಸಾರ್ವಜನಿಕರಿಗೆ ವರ್ಚುವಲ್‌ (ಆನ್‌ಲೈನ್‌) ಆಗಿ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಸೋಮವಾರ ನಡೆಯ ಲಿರುವ ವಿಜಯದಶಮಿ ಮೆರವಣಿಗೆಗೆಅರಮನೆ ಆವರಣದಲ್ಲಿ ನಡೆದಿರುವ ಸಿದ್ಧತೆಗಳನ್ನು ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಶನಿವಾರ ಪರಿಶೀಲಿಸಿದರು.

ADVERTISEMENT

ಕಾರ್ಯಕ್ರಮದ ವೇದಿಕೆ, ಗಣ್ಯರ ಆಸನ, ಜಂಬೂಸವಾರಿ ಸಾಗುವ ಹಾದಿ ಹಾಗೂ ಭದ್ರತೆಯನ್ನು ಪರಿಶೀಲಿ
ಸಿದರು. ಡಿಸಿಪಿ ಗೀತಾ ಪ್ರಸನ್ನ,
ಅರಮನೆ ಭದ್ರತಾಎಸಿಪಿ ಚಂದ್ರಶೇಖರ್‌ ಇದ್ದರು.

‘ಎಲ್ಲಾ ಸಿದ್ಧತೆಗಳು ನಡೆದಿವೆ. ತಾಲೀಮು ಕೂಡ ಯಶಸ್ವಿಯಾಗಿದೆ. ಕಡಿಮೆ ಸಂಖ್ಯೆಯಲ್ಲಿ ಕಲಾ ತಂಡಗಳು ಪಾಲ್ಗೊಳ್ಳುತ್ತಿವೆ. ನಂದಿಧ್ವಜ ಪೂಜೆ ಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಡಾ.ಚಂದ್ರಗುಪ್ತ ಹೇಳಿದರು.

ಕಲಾವಿದನಿಗೆ ಕೋವಿಡ್‌: ಮೆರವಣಿಗೆ ಯಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಗೊಂಬೆ ಕುಣಿತ ತಂಡದ ಕಲಾವಿದ ರೊಬ್ಬರಿಗೆ ‍‍ಪಾಸಿಟಿವ್‌ ಇರುವುದು ಗೊತ್ತಾಗಿದೆ.

‘ಪಾಸಿಟಿವ್ ಬಂದಿರುವ ವ್ಯಕ್ತಿಯು ಬೇರೆ ಊರಿನಿಂದ ಬಂದು ಶನಿವಾರವಷ್ಟೇ ತಾಲೀಮು ನಡೆಸಲುಕಲಾತಂಡ ಸೇರಿಕೊಂ ಡಿದ್ದರು. ತಂಡದಲ್ಲಿರುವಉಳಿದವರ ವರದಿ ನೆಗೆಟಿವ್‌ ಬಂದಿದ್ದು, ಅವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಂಕಿತ ವ್ಯಕ್ತಿಯನ್ನು ವಾಪಸ್‌ ಕಳುಹಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ತಿಳಿಸಿದರು.

ಆಯುಧಪೂಜೆ: ಶರನ್ನವರಾತ್ರಿ ಆಚರಣೆ ಪ್ರಯುಕ್ತ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅ.25ರಂದು ಆಯುಧ ಪೂಜೆ ನೆರವೇರಿಸಲಿದ್ದಾರೆ. ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ಆಯುಧಗಳಿಗೆ ಪೂಜೆ ನಡೆಯಲಿದೆ. ಅ.26ರಂದು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನದಲ್ಲಿ ಅವರು ಬನ್ನಿಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.