ADVERTISEMENT

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌: ಹುಣಸೂರು ತಂಡ ಚಾಂಪಿಯನ್ಸ್‌

ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌; ಜಯಸಿಂಹ, ದಿಶಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:31 IST
Last Updated 24 ಅಕ್ಟೋಬರ್ 2024, 15:31 IST
ಬಾಲಕಿಯರ 400 ಮೀ. ಓಟದಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು –ಪ್ರಜಾವಾಣಿ ಚಿತ್ರ
ಬಾಲಕಿಯರ 400 ಮೀ. ಓಟದಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು –ಪ್ರಜಾವಾಣಿ ಚಿತ್ರ   

ಮೈಸೂರು: ಹುಣಸೂರು ಶೈಕ್ಷಣಿಕ ತಾಲ್ಲೂಕಿನ ಅಥ್ಲೀಟ್‌ಗಳು ಗುರುವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ 2023–24ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸಮಗ್ರ ಚಾಂಪಿಯನ್‌ಷಿಪ್‌ ತಮ್ಮದಾಗಿಸಿಕೊಂಡರು. ಎಸ್. ಜಯಸಿಂಹ ಹಾಗೂ ದಿಶಾ ದಿವಾಕರ್ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ಹುಣಸೂರು ತಂಡವು ಬಾಲಕರ ವಿಭಾಗದಲ್ಲಿ 16 ಹಾಗೂ ಬಾಲಕಿಯರ ವಿಭಾಗದಲ್ಲಿ 25 ಸೇರಿದಂತೆ ಒಟ್ಟಾರೆ 41 ಅಂಕ ಕಲೆಹಾಕುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇವರಿಗೆ ಸ್ಪರ್ಧೆ ಒಡ್ಡಿದ ಎಚ್‌.ಡಿ. ಕೋಟೆ ಅಥ್ಲೀಟ್‌ಗಳು ಒಟ್ಟಾರೆ 34 ಅಂಕಗಳೊಂದಿಗೆ ರನ್ನರ್‌ ಅಪ್‌ ಆದರು.

ಬಾಲಕರ ವಿಭಾಗದಲ್ಲಿ ಹುಣಸೂರಿನ ಸೇಂಟ್‌ ಜೋಸೆಫ್‌ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಜಯಸಿಂಹ ಶಾಟ್‌ಪಟ್‌ ಹಾಗೂ ಡಿಸ್ಕಸ್‌ ಥ್ರೋನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿ ಪಡೆದರು.

ADVERTISEMENT

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಐಡಿಯಲ್‌ ಜಾವಾ ರೋಟರಿ ಶಾಲೆಯ ದಿಶಾ ದಿವಾಕರ್‌ 400 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ ಹಾಗೂ ಲಾಂಗ್‌ಜಂಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಒಟ್ಟು 11 ಅಂಕ ಸಂಪಾದಿಸಿ ವೈಯಕ್ತಿಕ ಚಾಂಪಿಯನ್‌ ಟ್ರೋಫಿ ಎತ್ತಿಹಿಡಿದರು.

ಕೆ.ಆರ್. ನಗರದ ಸೇಂಟ್‌ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಕುಬೇರ 100 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. ಎಚ್‌.ಡಿ. ಕೋಟೆ ತಾಲ್ಲೂಕಿನ ಹೊಸಹಳ್ಳಿ ವಿವೇಕ ಗಿರಿಜನ ಶಾಲೆಯ ಪುನೀತ್ 200 ಮೀ. ಓಟದಲ್ಲಿ ಪ್ರಥಮ ಹಾಗೂ 100 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು.

ಕ್ರೀಡಾಕೂಟದ ಮೊದಲ ದಿನದಂದು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಶುಕ್ರವಾರ ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ಉದ್ಘಾಟನೆ: ಶಾಲಾ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಕ್ರೀಡಾಕೂಟವನ್ನು ಇಲಾಖೆಯ ಜಂಟಿ ನಿರ್ದೇಶಕ ಪಾಂಡುರಂಗ ಉದ್ಘಾಟಿಸಿದರು. ಡಿಡಿಪಿಐ ಜವರೇಗೌಡ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಹದೇವಯ್ಯ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸೋಮಶೇಖರ್ ಇದ್ದರು.

ಬಾಲಕರ 400 ಮೀ. ಓಟದಲ್ಲಿ ಪಾಲ್ಗೊಂಡ ಸ್ಪರ್ಧಿಗಳು –ಪ್ರಜಾವಾಣಿ ಚಿತ್ರ

ಫಲಿತಾಂಶ (ಪ್ರಾಥಮಿಕ ಶಾಲಾ ವಿಭಾಗ) ಬಾಲಕರು: 100 ಮೀ. ಓಟ: ಕುಬೇರ (ಸೇಂಟ್‌ ಜೋಸೆಫ್‌ ಶಾಲೆ ಕೆ.ಆರ್. ನಗರ. ಕಾಲ: 13.02 ಸೆಕೆಂಡ್‌)–1 ಪುನೀತ್‌ (ವಿವೇಕ ಗಿರಿಜನ ಶಾಲೆ ಹೊಸಹಳ್ಳಿ)–2 ಪೂರ್ವಜ್‌ ಸಿಂಗ್‌ (ನಿರ್ಮಲಾ ಶಾಲೆ ಮೈಸೂರು)–3; 200 ಮೀ. ಓಟ: ಪುನೀತ್‌ (ವಿವೇಕ ಗಿರಿಜನ ಶಾಲೆ ಹೊಸಹಳ್ಳಿ. ಕಾಲ: 27.30 ಸೆಕೆಂಡ್‌)–1 ಕುಬೇರ (ಸೇಂಟ್‌ ಜೋಸೆಫ್‌ ಶಾಲೆ ಕೆ.ಆರ್. ನಗರ)–2 ಮೋನೇಶ್‌ (ಜಿಎಚ್‌ಪಿಎಸ್ ಬೀಡನಹಳ್ಳಿ)–3; 400 ಮೀ. ಓಟ: ರಾಹುಲ್ (ಜಿಎಚ್‌ಪಿಎಸ್ ಹಾಲಸಂತೆ. ಕಾಲ: 1ನಿ 03.28 ಸೆ)–1 ಮೋನೇಶ್–2 ವಿನಯ್‌ (ಜಿಎಚ್‌ಪಿಎಸ್ ಸವ್ವೆ)–3; ವಿನಯ್‌ (ಜಿಎಚ್‌ಪಿಎಸ್‌ ಸವ್ವೆ. ಕಾಲ; 1ನಿಮಿಷ 46.34 ಸೆ)–1 ಮೋನೇಶ್‌ –2 ಚಿರಂಜೀವಿ (ಸಾಕ್ರೆಡ್ ಹಾರ್ಟ್‌ ಶಾಲೆ ನಾಗನಹಳ್ಳಿ)–3. ಲಾಂಗ್‌ ಜಂಪ್‌: ಮಚ್ಚೇಂದ್ರ (ಎಂವಿ ಎಬಿವಿ ಶಾಲೆ ನಲ್ಲೂರುಪಾಳ್ಳ. ಉದ್ದ: 4.58 ಮೀಟರ್‌)–1 ವಿ. ಪ್ರಶಾಂತ್‌ (ಬಿವಿಎಸ್ ಕೆ.ಆರ್. ನಗರ)–2 ದೇವೇಶ (ಜಿಎಚ್‌ಪಿಎಸ್ ಅಲ್ಲಯ್ಯನಪುರ)–3; ಶಾಟ್‌ಪಟ್‌: ಎಸ್. ಜಯಸಿಂಹ (ಸೇಂಟ್‌ ಜೋಸೆಫ್‌ ಶಾಲೆ ಹುಣಸೂರು. ದೂರ: 10.67 ಮೀಟರ್‌)–1 ವೆಂಕಟೇಶ (ಗುರುಕುಲ ಕೆ.ಆರ್‌.ನಗರ)–2 ಕೆ.ಆರ್. ಯಶವಂತ್‌ (ಜಿಎಚ್‌ಪಿಎಸ್ ಅರಸು ಕಲ್ಲಹಳ್ಳಿ)–3; ಡಿಸ್ಕಸ್ ಥ್ರೋ: ಎಸ್. ಜಯಸಿಂಹ (ಸೇಂಟ್‌ ಜೋಸೆಫ್‌ ಶಾಲೆ ಹುಣಸೂರು. ದೂರ: 25.48 ಮೀಟರ್‌)–1 ಸುಶೀಲ್‌ ಕುಮಾರ್ (ಬಿಎನ್‌ಕೆ ಹುಂಡಿ )–2 ವೆಂಕಟೇಶ (ಗುರುಕುಲ ಕೆ.ಆರ್. ನಗರ)–3.

ಬಾಲಕಿಯರ ವಿಭಾಗ 100 ಮೀ. ಓಟ: ಅಕ್ಷತಾ ರಾಯಗೋಳ (ಎಸ್‌ಸಿಎಂಇ ಮೈಸೂರು. ಕಾಲ: 14.35 ಸೆಕೆಂಡ್‌)–1 ಅನನ್ಯಾ (ಎಸ್‌ಎಚ್‌ಪಿ ಶಾಲೆ ಶಾಂತಿಪುರ)–2 ಅಂಜುಶ್ರೀ ದಾಸ್‌ (ಸೇಂಟ್‌ ಜೋಸೆಫ್‌ ಶಾಲೆ ಎಚ್‌.ಡಿ. ಕೋಟೆ)–3; 200 ಮೀ. ಓಟ ಎಚ್‌.ಆರ್. ಕಾಂಚನಾ (ಜಿಎಚ್‌ಪಿಎಸ್ ಹೊಸಹೊಳಲು. ಕಾಲ: 29.69 ಸೆಕೆಂಡ್‌)–1 ದಿಶಾ ದಿವಾಕರ್‌ (ಐಡಿಯಲ್‌ ಜಾವ ರೋಟರಿ ಶಾಲೆ ಮೈಸೂರು)–2 ಎಂ. ಮಧುಶಾಲಿನಿ (ಸೇಂಟ್‌ ಜೋಸೆಫ್‌ ಶಾಲೆ ಹುಣಸೂರು)–3; 400 ಮೀ ಓಟ: ದಿಶಾ ದಿವಾಕರ್ (ಕಾಲ: 1ನಿ 09.09 ಸೆ)–1 ಜೆ.ಪಿ. ವೈಷ್ಣವಿ (ಟೆರೇಷಿಯನ್ ಶಾಲೆ ಮೈಸೂರು)–2 ಅನುಶ್ರೀ ದಾಸ್ (ಸೇಂಟ್‌ ಜೋಸೆಫ್‌ ಶಾಲೆ ಎಚ್‌.ಡಿ. ಕೋಟೆ)–3; 600 ಮೀ. ಓಟ: ಪವಿತ್ರಾ (ಜಿಎಚ್‌ಪಿಎಸ್ ಚಿಕ್ಕಹುಣಸೂರು. ಕಾಲ: 1ನಿ 58.92 ಸೆಕೆಂಡ್‌)–1 ಸುಮಾ (ಜಿಎಚ್‌ಪಿಎಸ್. ಹೊಸಕುಕ್ಕೂರು)–2 ಎನ್.ಎಂ. ಸಂಜನಾ (ವಾಣಿವಿಲಾಸ ಅರಸು ಶಾಲೆ ಮೈಸೂರು)–3. ಲಾಂಗ್‌ ಜಂಪ್‌: ಜೀವಿತಾ (ಭಾರತೀಯ ವಿದ್ಯಾಮಂದಿರ ಕೆ.ಆರ್. ನಗರ. ಉದ್ದ: 3.84 ಮೀಟರ್‌)–1 ದಿಶಾ ದಿವಾಕರ್‌ (ಐಜೆಆರ್‌ಎಸ್‌ ಮೈಸೂರು)–2 ಇಂಚರಾ (ಎಚ್‌ಪಿಎಸ್ ಹೊಸಪಿಂಚಳ್ಳಿ)–3; ಹೈಜಂಪ್‌: ಲಕ್ಷ್ಮಿ (ಜಿಎಚ್‌ಪಿಎಸ್ ಹೊಸರಾಮನಹಳ್ಳಿ. ಎತ್ತರ: 1.29 ಮೀ)–1 ಅಕ್ಷತಾ ರಾಯಗೋಳ (ಎಸಿಎಂಇ ಮೈಸೂರು)–2 ಕೆ.ಎನ್. ವೈಭವಿ (ಸೇಂಟ್‌ ಜೋಸೆಫ್‌ ಶಾಲೆ ಕೆ.ಆರ್. ನಗರ)–3; ಶಾಟ್‌ಪಟ್: ಸೌಖ್ಯ (ಜೆಎಸ್‌ಎಸ್ ಶಾಲೆ ಸುತ್ತೂರು. ದೂರ: 7.58 ಮೀ)–1 ಎಚ್.ಆರ್‌. ಅಕ್ಷತಾ (ಸೇಂಟ್‌ ಜೋಸೆಫ್‌ ಶಾಲೆ ಹುಣಸೂರು)–2 ಬೃಂದಾ (ಜಿಎಚ್‌ಪಿಎಸ್ ಸವ್ವೆ )–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.