ADVERTISEMENT

ಪೊಲೀಸ್ ರನ್: ಪುರುಷೋತ್ತಮ, ಅಶ್ವಿನಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:14 IST
Last Updated 2 ಮಾರ್ಚ್ 2026, 4:14 IST
ಮೈಸೂರು ಜಿಲ್ಲಾ ಮತ್ತು ನಗರ ಪೊಲೀಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ರನ್’ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರು ಜಿಲ್ಲಾ ಮತ್ತು ನಗರ ಪೊಲೀಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ರನ್’ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ಜಿಲ್ಲಾ ಮತ್ತು ನಗರ ಪೊಲೀಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ರನ್’ ಸ್ಪರ್ಧೆಯ 10 ಕಿ.ಮೀ ಓಟದ ಸಾರ್ವಜನಿಕ ವಿಭಾಗದಲ್ಲಿ ಆರ್‌.ಪುರುಷೋತ್ತಮ ಹಾಗೂ ಅಶ್ವಿನಿ ಪ್ರಥಮ ಸ್ಥಾನ ಪಡೆದರು.

10 ಕಿ. ಮೀ ಓಟ: ಪುರುಷರ ವಿಭಾಗ– ಕರಣ್‌.ಜೆ.ಆರ್‌ (ದ್ವಿ), ಮಹೇಶ್‌ (ತೃ), ಕೆ.ವಿ.ಓಂಕಾರ್‌ (ಚ). ಮಹಿಳಾ ವಿಭಾಗ– ಅಥಿಶಾ (ದ್ವಿ), ಪ್ರಿಯಾಂಕ (ತೃ) ಸ್ಥಾನ ಪಡೆದರು.

ಪೊಲೀಸರು: ಪುರುಷರು– ನಗರ ಸಶಸ್ತ್ರ ಮೀಸಲು ಪಡೆಯ ಎಚ್‌.ಕೆ.ಮೇಘರಾಜ್‌ (ಪ್ರ), ಎಚ್‌.ವಿಠಲ್‌ (ದ್ವಿ), ಮಹೇಶ್‌ರಾಜ್‌ ಪಾಟೀಲ್‌ (ತೃ), ಕೆಎಸ್‌ಎಪಿಯ ಮಲ್ಲೇಶ್‌.ಎ.ಎಂ (ಚ). ಮಹಿಳಾ ವಿಭಾಗ– ಮಾಲ ಶ್ರೀ ಜಾದವ್‌ (ಪ್ರ). ಪ್ರಥಮ ₹ 10 ಸಾವಿರ, ದ್ವಿತೀಯ ₹ 5ಸಾವಿರ, ತೃತೀಯ ₹ 3ಸಾವಿರ ಬಹುಮಾನ ವಿತರಿಸಲಾಯಿತು.

ADVERTISEMENT

5 ಕಿ.ಮೀ. ಓಟ: ಸಾರ್ವಜನಿಕರು, ಪುರುಷರು– ಎಂ.ನಿತಿನ್‌ (ಪ್ರ), ರೋಹನ್‌ ಬೇಕಲ್ (ದ್ವಿ), ಎನ್‌.ದೊರೆಸ್ವಾಮಿ (ತೃ), ಎನ್‌.ಪಿ.ಆದಿತ್ಯ (ಚ). ಮಹಿಳೆಯರು– ವಿದ್ಯಾ (ಪ್ರ), ವರ್ಷಿತಾ (ದ್ವಿ), ಪ್ರಕೃತಿ (ತೃ), ಭಾನು ಪ್ರಿಯಾ (ಚ). ಪೊಲೀಸರು, ಪುರುಷರು– ವಿನೋದ್‌ (ಪ್ರ), ಪ್ರಭು ಜಮಖಂಡಿ (ದ್ವಿ), ರಘುನಂದನ್‌ (ತೃ), ಮಂಜುನಾಥ್‌ ಗಂಜಿಹಾಳ್‌ (ಚ). ಮಹಿಳೆಯರು– ಭುವನೇಶ್ವರಿ (ಪ್ರ), ಭಾಗ್ಯ (ದ್ವಿ), ಅನುಷಾ (ತೃ) ಸ್ಥಾನ ಪಡೆದರು. ಪ್ರಥಮ ₹ 5ಸಾವಿರ, ದ್ವಿತೀಯ ₹ 3ಸಾವಿರ, ತೃತೀಯ ₹ 2 ಸಾವಿರ ವಿತರಿಸಿದರು.

ಡ್ರಗ್‌ ಮುಕ್ತ ಕರ್ನಾಟಕ, ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ ಸೈಬರ್‌ ಪ್ರಕರಣಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು. 

ಸಚಿವ ಎಚ್.ಸಿ.ಮಹದೇವಪ್ಪ ಚಾಲನೆ

ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿ ‘ಕರ್ನಾಟಕ ಪೊಲೀಸ್ ಕಾರ್ಯದಕ್ಷತೆ ನಾವೆಲ್ಲಾ ಹೆಮ್ಮೆ ಪಡುವಂತೆ ಮಾಡಿದೆ. ಇಲಾಖೆಯ ಕೆಲಸ ಕಠಿಣವಾಗಿದ್ದು ಮೈಯೆಲ್ಲಾ ಕಣ್ಣಾಗಿರಬೇಕು. ಜನರಲ್ಲಿ ಮಾಹಿತಿ ಶಿಕ್ಷಣ ಸಂವಹನದ ಮೂಲಕ ಜಾಗೃತಿ ಮೂಡಿಸಿ ಉತ್ತಮ ಸಮಾಜ ಕಟ್ಟುತ್ತಿರುವುದು ಮಾದರಿ ಕಾರ್ಯ’ ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ ಟಿ.ಎಸ್.ಶ್ರೀವತ್ಸ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್ ಡಿಸಿಪಿ ಕೆ.ಎಸ್.ಸುಂದರ್ ರಾಜ್ ಡಿಸಿಎಫ್ ಪರಮೇಶ್ ಚಲನಚಿತ್ರ ನಟರಾದ ವಿನಯ್‌ ರಾಜ್‌ಕುಮಾರ್‌ ಅಮೃತಾ ಅಯ್ಯಂಗಾರ್‌ ಬೃಂದಾ ಆಚಾರ್ಯ ಭಾಗವಹಿಸಿದ್ದರು.

ಮೈಸೂರು ಜಿಲ್ಲಾ ಮತ್ತು ನಗರ ಪೊಲೀಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ರನ್’ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.