ADVERTISEMENT

ಮೈಸೂರು | ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ: ಅಶೋಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 17:40 IST
Last Updated 11 ಜನವರಿ 2026, 17:40 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಮೈಸೂರು: ‘ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನರೇಗಾ ಕುರಿತು ಅಧಿವೇಶನ ಕರೆದರೆ ಅವರೇ ಸಿಕ್ಕಿಕೊಳ್ಳುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಇಲ್ಲಿ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕರ ಜೊತೆ ಚರ್ಚಿಸಿ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಅಭಿವೃದ್ಧಿ ಕುರಿತು ಕಾಂಗ್ರೆಸ್‌ ಜೊತೆ ಬಹಿರಂಗ ಚರ್ಚೆಗೆ ಎನ್‌ಡಿಎ ಒಕ್ಕೂಟ ಸಿದ್ಧವಾಗಿದೆ. ಸವಾಲು ಹಾಕಿರುವ ಶಿವಕುಮಾರ್ ಅವರೇ ಅಖಾಡ ನಿರ್ಧರಿಸಲಿ, ನಾವು ಯಾವ ಕುಸ್ತಿಗೂ ಸಿದ್ಧರಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ನರೇಗಾ ಹೆಸರು ಬದಲಾವಣೆ ಖಂಡಿಸಿ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಉಲ್ಲೇಖಿಸಿ, ‘ಯಾವ ಪುರುಷಾರ್ಥಕ್ಕೆ ವಿಶೇಷ ಅಧಿವೇಶನ? ಮನಸ್ಸಿಗೆ ಬಂದ ಹಾಗೆ ಕರೆದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಏನು?. ‘ಗಾಂಧಿ ಹೆಸರು ಬದಲಿಸಿ ಭಾರತ ಎಂದು ಹೆಸರಿಟ್ಟರೆ ತೊಂದರೆ ಏನು? ರಾಜೀವ್, ಇಂದಿರಾ ಹೆಸರಿಟ್ಟಾಗ ನಾವು ವಿರೋಧಿಸಿದ್ದೇವಾ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.