ADVERTISEMENT

ಮೈಸೂರು|ಇಂದಿನಿಂದ ರಂಜಾನ್‌ ಉಪವಾಸ: ಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:58 IST
Last Updated 19 ಫೆಬ್ರುವರಿ 2026, 3:58 IST
ಮೈಸೂರಿನ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಚೇರಿಯಲ್ಲಿ ನಡೆದಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಚೇರಿಯಲ್ಲಿ ನಡೆದಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಚಂದ್ರ ದರ್ಶನವಾಗಿದ್ದು, ಗುರುವಾರದಿಂದ ರಂಜಾನ್‌ ಉಪವಾಸ ಆಚರಣೆ ನಡೆಯಲಿದೆ’ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಘೋಷಿಸಲಾಯಿತು.

ಮೈಸೂರಿನ ಸರ್ ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪವಾಸಕ್ಕಾಗಿ ನಡೆಸಿರುವ ಸಿದ್ಧತೆ ಕುರಿತು ಮಾಹಿತಿ ಪಡೆದರು. 

ಬಳಿಕ ಮಾತನಾಡಿ, ‘ನಮ್ಮ ದೇಶದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಂದ್ರ ದರ್ಶನವಾಗಿರುವುದರಿಂದ, ರಂಜಾನ್ ಪವಿತ್ರ ತಿಂಗಳು ಆರಂಭವಾಗಿದ್ದು, ಗುರುವಾರದಿಂದ ಉಪವಾಸ ಆರಂಭವಾಗುತ್ತದೆ. ಸಮುದಾಯದವರು ಶ್ರದ್ಧೆಯಿಂದ ಧಾರ್ಮಿಕ ಆಚರಣೆ ನಡೆಸಬೇಕು’ ಎಂದು ತಿಳಿಸಿದರು.

ADVERTISEMENT

ಸಭೆಯ ನಿರ್ಣಯವನ್ನು ಮೊಹಮ್ಮದ್ ಜಕಾ ಉಲ್ಲಾ ಸಾಹೇಬ್ ಸಿದ್ದಿಕಿ ಓದಿದರು. ಸಭೆಯಲ್ಲಿ ಮೊಹಮ್ಮದ್ ಜಕಾ ಉಲ್ಲಾ ಸಾಹೇಬ್ ಸಿದ್ದಿಕಿ, ಮುಫ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಶಾ ವಲಿ ಉಲ್ಲಾ ಸಾಹೇಬ್ ಉಮ್ರಿ, ಇಬ್ರಾಹಿಂ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಜೀಜ್ ಉಲ್ಲಾ ಅಜ್ಜು, ಸಮಾಜ ಸೇವಕ ಮುಮ್ತಾಜ್ ಅಹಮದ್, ಪಾಲಿಕೆ ಮಾಜಿ ಸದಸ್ಯ ಸುಹೇಲ್ ಬೇಗ್, ಜಮೀಲ್ ಅಹ್ಮದ್ ಅಶ್ರಫಿ, ನಾಸಿರುದ್ದೀನ್ ಬಾಬು, ಶಬ್ನಮ್ ಸಯೀದ್ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.