ADVERTISEMENT

ಹನುಮ ಜಯಂತಿ: ಪೊಲೀಸ್ ಪಥಸಂಚಲನ

ಕೆ.ಆರ್.ನಗರ ಪಟ್ಟಣದಲ್ಲಿ ಇಂದು ನಡೆಯಲಿರುವ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:14 IST
Last Updated 10 ಡಿಸೆಂಬರ್ 2025, 3:14 IST
ಕೆ.ಆರ್.ನಗರ ಪಟ್ಟಣದಲ್ಲಿ ನಡೆಯುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ರಾಜಣ್ಣ ನೇತೃತ್ವದಲ್ಲಿ ಮಂಗಳವಾರ ಪೊಲೀಸ್ ಪಥಸಂಚಲನ ನಡೆಯಿತು
ಕೆ.ಆರ್.ನಗರ ಪಟ್ಟಣದಲ್ಲಿ ನಡೆಯುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ರಾಜಣ್ಣ ನೇತೃತ್ವದಲ್ಲಿ ಮಂಗಳವಾರ ಪೊಲೀಸ್ ಪಥಸಂಚಲನ ನಡೆಯಿತು   

ಸಾಲಿಗ್ರಾಮ: ಕೆ.ಆರ್.ನಗರ ಪಟ್ಟಣದಲ್ಲಿ ಬುಧವಾರ ನಡೆಯುವ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಪಥಸಂಚಲ ನಡೆಯಿತು.

ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿದರು.

ಬುಧವಾರ ಮುಂಜಾನೆಯಿಂದ ಸಂಜೆ ತನಕ ಪಟ್ಟಣದ ಆಂಜನೇಯ ಬ್ಲಾಕ್‌ನಿಂದ ಬಜಾರ್‌ ರಸ್ತೆ, ಪುರಸಭೆ ಸರ್ಕಲ್‌ನಿಂದ ಮತ್ತೆ ಆಂಜನೇಯ ಬ್ಲಾಕ್‌ತನಕ ಹನುಮ ಉತ್ಸವ ಹಾಗೂ ಕಲಾತಂಡಗಳ ಮೆರವಣೆಗೆ ಸಾಗಲಿರುವ ರಸ್ತೆಗಳಲ್ಲಿ ಪಥಸಂಚಲ ನಡೆಯಿತು.

ಹನುಮ ಉತ್ಸವ ಸಾಗುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಶಾಂತಿ ಭಂಗ ಮಾಡದಂತೆ ಪೊಲೀಸ್ ಪಹರೆ ಆಯೋಜಿಸಲಾಗಿದ್ದು, ಶಾಂತಿ ಭಂಗಕ್ಕೆ ಪ್ರಯತ್ನ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್‌ಪಿ ರಾಜಣ್ಣ ತಿಳಿಸಿದರು.

ಕಾರ್ಯಕ್ರಮಕ್ಕೆ ಐವರು ಇನ್‌ಸ್ಪೆಕ್ಟರ್, 20 ಪಿಎಸ್ಐ, ಹೆಡ್‌ ಕಾನ್‌ಸ್ಟೆಬಲ್‌, ಪಿ.ಸಿಗಳು 350, ರಾಜ್ಯ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಪಥಸಂಚಲನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶಿವಪ್ರಕಾಶ್, ಶಶಿಕುಮರ್, ಪಿಎಸ್ಐ ಲಿಂಗರಾಜು, ಸ್ವಾಮಿಗೌಡ, ಮುಖ್ಯ ಕಾನ್‌ಸ್ಟೆಬಲ್‌ ಪರಶುರಾಮೇಗೌಡ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.