
ಮೈಸೂರು: ಸಾವರ್ಕರ್ ಪ್ರತಿಷ್ಠಾನ ಮೈಸೂರು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಇಂದಿರಾ ಗಾಂಧಿ ಮತ್ತು ಸಾವರ್ಕರ್’ ಕಾರ್ಯಕ್ರಮದಲ್ಲಿ ಸಾವರ್ಕರ್ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
1983ರಲ್ಲಿ ರಲ್ಲಿ ಇಂದಿರಾ ಗಾಂಧಿ ಸೈಚನೆ ಮೇರೆಗೆ ಕೇಂದ್ರ ಸರ್ಕಾರದ ಚಲನಚಿತ್ರ ವಿಭಾಗವು ನಿರ್ಮಿಸಿದ್ದ ‘ಮಹಾನ್ ಕ್ರಾಂತಿಕಾರಿಯ ಜೇವನ’ ಸಾಕ್ಷಚಿತ್ರವನ್ನು ಸಹ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
1980ರಲ್ಲಿ ಇಂದಿರಾ ಗಾಂಧಿಯ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿ ಪಂಡಿತ್ ಬಾಕ್ಲೆರವರಿಗೆ ಪತ್ರ ಬರೆದು, ಸಾವರ್ಕರ್‌ರನ್ನು ಬಣ್ಣಿಸಿದ್ದ ಪತ್ರವನ್ನು ಹಾಗೂ ಸಾವರ್ಕರ್ ಗೌರವಾರ್ಥ ಬಿಡುಗಡೆ ಮಾಡಿದ್ದ ಅಂಚೆಚೀಟಿಯನ್ನು ಸಹ ಪ್ರದರ್ಶಿಸಲಾಯಿತು. 1983ರಲ್ಲಿ ಕಾಕಿನಾಡಾದಲ್ಲಿ ನಡೆದ ಕಾಂಗ್ರಸಿನ 38ನೇ ರಾಷ್ಟ್ರೀಯ ಅಧಿವೇಶನದ ಪ್ರಮುಖ ನಿರ್ಣಯಗಳಲ್ಲಿ, ಸಾವರ್ಕರ್ ಅವರನ್ನು ನಿರಂತರ ಬಂಧನಕ್ಕೊಳಪಡಿಸಿರುವುದರ ವಿರುದ್ದ ಖಂಡನಾ ನಿರ್ಣಯ ಕೈಗೊಂಡಿದ್ದನ್ನು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ತನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸರ್ವಾನುಮತದ ನಿರ್ಣಯವನ್ನು ಕಾರ್ಯಕ್ರಮದಲ್ಲಿ ನೆನೆಯಲಾಯಿತು.
ಚಿಂತಕ ಪ್ರವೀಣ್ ಕುಮಾರ್ ಮಾವಿನಕಾಡು ವಿಷಯ ಮಂಡಿಸಿದರು. ಸಾವರ್ಕರ್ ಪ್ರತಿಷ್ಠಾನದ ಕಾರ್ಯದರ್ಶಿ ರಾಕೇಶ್ ಭಟ್, ಆದಿತ್ಯ ಅಧಿಕಾರಿ ಆಸ್ಪತ್ರೆಯ ವೈದ್ಯ ಚಂದ್ರಶೇಖರ, ಪ್ರತಿಷ್ಠಾನದ ಸಹ-ಕಾರ್ಯದರ್ಶಿ ಶಿವು ಚಿಕ್ಕಕಾನ್ಯ, ಸಾವರ್ಕರ್ ಯುವ ಬಳಗದ ವಿಕ್ರಂ ಅಯ್ಯಂಗಾರ್, ಸಂದೇಶ್ ಪವಾರ್, ಪ್ರತಿಷ್ಠಾನದ ಮೈಸೂರು ಕೇಂದ್ರ ಸಮಿತಿಯ ಎಸ್. ಮಹೇಶ್ ಕುಮಾರ್, ಶಿವು ಪಟೇಲ್, ಡಿ. ರಾಘವೇಂದ್ರ, ಎಚ್.ಎಸ್. ಹಿರಿಯಣ್ಣ, ಮಂಗಳ ಗೌರಮ್ಮ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.