
ಹುಣಸೂರು: ನಾಗರಹೊಳೆ ಹುಲಿ ಅಭಯಾರಣ್ಯ ವ್ಯಾಪ್ತಿಯ ಹನಗೋಡಿನ ಹೆಮ್ಮಿಗೆ ಗ್ರಾಮದ ರೈತ ಸಿದ್ದೇಗೌಡ ಎಂಬವರ ತಾಳೆ ತೋಟದಲ್ಲಿ ಇರಿಸಿದ್ದ ಬೋನಿಗೆ 7 ವರ್ಷ ವಯಸ್ಸಿನ ಗಂಡು ಹುಲಿ ಸೆರೆ ಸಿಕ್ಕಿದೆ ಎಂದು ಯೋಜನಾ ನಿರ್ದೇಶಕರ ವಿಭಾಗದ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
‘ಒಂದು ತಿಂಗಳಿಂದ ಹುನಗೋಡಿನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡು ಜಾನುವಾರುಗಳನ್ನು ಭೇಟೆಯಾಡಿ ಳೀಯರಲ್ಲಿ ಆತಂಕ ಉಂಟು ಮಾಡುತ್ತಿದ್ದ ಹುಲಿ ಸೆರೆಗೆ ಇಲಾಖೆ ಆನೆ ಮತ್ತು ಥರ್ಮಲ್ ಡ್ರೋನ್ ಬಳಸಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೆರೆಗೆ ಬೋನು ಇಡಲಾಗಿತ್ತು. ಸೋಮವಾರ ಬೆಳಗಿನ ಜಾವ ಗಂಡು ಹುಲಿ ಬೋನಿಗೆ ಸೆರೆ ಸಿಕ್ಕಿದೆ’ ಎಂದಿದ್ದಾರೆ.
ಹುಲಿಯನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗಿದೆ. ಹುಲಿಯ ಮುಖಕ್ಕೆ ಆಗಿದ್ದ ಗಾಯಕ್ಕೆ ಪಶುವೈದ್ಯಾಧಿಕಾರಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಬನ್ನೇರುಘಟ್ಟದಲ್ಲಿ ನೀಡಿ, ಗಾಯ ವಾಸಿಯಾದ ಬಳಿಕ ಇಲಾಖೆ ಉನ್ನತಾಧಿಕಾರಿಗಳ ಸೂಚನೆಯಂತೆದಿನ ಕ್ರಮ ತೆಗೆದುಕೊಳ್ಳಲಿದ್ದೇವೆ’ ಎಂದು ಲಕ್ಷ್ಮಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹುಣಸೂರು ಪ್ರಾದೇಶಿಕ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಮತ್ತು ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.