ಮೈಸೂರು: ನಟ ಶಿವರಾಜ್‌ಕುಮಾರ್ ಅವರು ನಗರದ ಒಂಟಿಕೊಪ್ಪಲಿನಲ್ಲಿ ರಸ್ತೆ ಬದಿ ಸಾಮಾನ್ಯನಂತೆ ಕುಳಿತು ಚಹಾ ಸೇವನೆ ಮಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.
ಭಾನುವಾರ ಬೆಳಿಗ್ಗೆ ಡಾ.ರಾಜ್ ಟೀ ಸ್ಟಾಲ್‌ಗೆ ಬಂದ ಅವರು ರಸ್ತೆ ಬದಿಯ ಕಲ್ಲಿನ ಬೆಂಚ್‌ನಲ್ಲಿ ಕುಳಿತು ಟೀ ಕುಡಿದರು.
ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸಂತಸಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರಲ್ಲದೆ ಅವರ ಬಳಿ ಕುಳಿತು ಫೋಟೊ ತೆಗೆಸಿಕೊಂಡರು. ಯಾರನ್ನೂ ನಿರಾಸೆಗೊಳಿಸದ ಅವರು ಫೋಟೊ, ಸೆಲ್ಫಿಗೆ ಪೋಸ್ ಕೊಟ್ಟರು. ಅಭಿಮಾನಿಗಳ ಜತೆ ಒಂದಷ್ಟು ಸಮಯ ಕಳೆದು ಕಾರನ್ನೇರಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.