ADVERTISEMENT

ಸರಗೂರು: ‘ತರಬೇತಿ ‍ಪಡೆದು ಬದುಕು ಕಟ್ಟಿಕೊಳ್ಳಿ’

ಪಂಚಕರ್ಮ ಥೆರಫಿ ಮತ್ತು ಯೋಗ ಬೇಸಿಸ್‌ ತರಬೇತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 3:09 IST
Last Updated 15 ಡಿಸೆಂಬರ್ 2025, 3:09 IST
ಸರಗೂರು ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ನಬಾರ್ಡ್‌  ಸಹಯೋಗದಲ್ಲಿ ಆಯೋಜಿಸಿದ್ದ ಪಂಚಕರ್ಮ ಥೆರಫಿ ಮತ್ತು ಯೋಗ ಬೇಸಿಸ್‌ ತರಬೇತಿಯನ್ನು ನಬಾರ್ಡ್ ವ್ಯವಸ್ಥಾಪಕ ಶಾಂತವೀರ ಉದ್ಘಾಟನೆ ಮಾಡಿದರು
ಸರಗೂರು ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ನಬಾರ್ಡ್‌  ಸಹಯೋಗದಲ್ಲಿ ಆಯೋಜಿಸಿದ್ದ ಪಂಚಕರ್ಮ ಥೆರಫಿ ಮತ್ತು ಯೋಗ ಬೇಸಿಸ್‌ ತರಬೇತಿಯನ್ನು ನಬಾರ್ಡ್ ವ್ಯವಸ್ಥಾಪಕ ಶಾಂತವೀರ ಉದ್ಘಾಟನೆ ಮಾಡಿದರು   

ಸರಗೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ, ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ನಬಾರ್ಡ್‌ ಸಹಯೋಗದಲ್ಲಿ ಪಂಚಕರ್ಮ ಥೆರಫಿ ಮತ್ತು ಯೋಗ ಬೇಸಿಸ್‌ ತರಬೇತಿ ಉದ್ಘಾಟನೆ ಬುಧವಾರ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಿತು. 

ನಬಾರ್ಡ್ ವ್ಯವಸ್ಥಾಪಕ ಶಾಂತವೀರ ಮಾತನಾಡಿ ನಮ್ಮ ಬ್ಯಾಂಕ್‌ ವತಿಯಿಂದ ಸಮುದಾಯ ಅಭಿವೃದ್ಧಿಗೆ ಬೇಕಾದ ಹಲವಾರು ಯೋಜನೆಗಳನ್ನು ಮಾಡಲಾಗುತ್ತಿದೆ. ಸಮುದಾಯದ ಯುವಕರು, ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಬೇಕಾದ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ. ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಮೂಲಕ ಸಮುದಾಯ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಲು ನಬಾರ್ಡ್‌ ಮುಂದಾಗಿದೆ. ಪ್ರಸ್ತುತ ಪಂಚಕರ್ಮ ಥೆರಫಿ ಮತ್ತು ಯೋಗ ಬೇಸಿಸ್‌ ತರಬೇತಿಗೆ ಆಸಕ್ತಿ ಇರುವ ಬಡ ಕುಟುಂಬಗಳಿಗೆ ಸಹಕಾರ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.  ಆರ್ಥಿಕವಾಗಿ ಮುಂದೆ ಬಂದು ತಮ್ಮ ಕುಟುಂಬವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.

ಡಾ. ಡೆನ್ನಿಸ್‌ ಡಿ ಚೌಹಾಣ್‌ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಸಮುದಾಯ ಮಟ್ಟದಲ್ಲಿ ಹಾಗೂ ಸಾಂಸ್ಥಿಕವಾಗಿ ಸುಮಾರು 21 ತರಹದ ಕೌಶಲ  ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಅದರಂತೆ 11ನೇ ಬ್ಯಾಚ್‌ನ ಪಂಚಕರ್ಮ ಥೆರಫಿ ಹಾಗೂ ಯೋಗ ಬೇಸಿಸ್‌ ತರಬೇತಿಯನ್ನು ಪ್ರಾರಂಭ ಮಾಡುತ್ತಿದ್ದು 6 ತಿಂಗಳ ಅವದಿಯ ತರಬೇತಿ ಇದಾಗಿರುತ್ತದೆ. 11 ನೇ ಬ್ಯಾಚ್‌ನ ತರಬೇತಿಗೆ ನಬಾರ್ಡ್‌ ವತಿಯಿಂದ ಸಹಕಾರ ನೀಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.

ADVERTISEMENT

ಪ್ರವೀಣ್‌ ಗೌಂಡರ್‌ ಮಾತನಾಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕರಾದ ಡಾ.ಡೆನ್ನಿಸ್‌ ಡಿ ಚೌಹಾಣ್‌, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಉಪ ನಿರ್ದೇಶಕ ಡಾ.ಎಚ್.ಕೆ. ಶಂಕರ್‌, ಹಿರಿಯ ವೈದ್ಯಾಧಿಕಾರಿ ಡಾ. ಪ್ರಶಾಂತ್‌, ಎಸ್.ಬಿ.ಐ ನ ಮುಖ್ಯ ವ್ಯವಸ್ಥಾಪಕ ಪ್ರವೀಣ್‌ ಗೌಂಡರ್‌, ಶಾಖಾ ವ್ಯವಸ್ಥಾಪಕ ವಿ. ರಾಕೇಶ್‌, ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ ನಾಯಕ್‌, ಕಾರ್ಯಕ್ರಮ ವ್ಯವಸ್ಥಾಪಕ ಚಿನ್ನಮಹದೇವ, ಉದ್ಯೋಗ ವ್ಯವಸ್ಥಾಪಕ ರವಿಕುಮಾರ್‌ ಪಿ.ಜಿ, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕರಾದ ಸಂಧ್ಯಾ ಬಿ.ಜಿ, ತರಬೇತಿ ಸಂಯೋಜಕರಾದ ಸುದಾರಾಣಿ, ಶಿವಲಿಂಗನಾಯಕ, ಊರ್ಮಿಳಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.