ADVERTISEMENT

ಹುಣಸೂರು | ಸೌರ ವಿದ್ಯುತ್‌ ನಿಂದ ಉಳಿಕೆ, ಗಳಿಕೆ

ವಿದ್ಯುತ್‌ ಸ್ವಾವಲಂಬನೆಗೆ ಬಿಳಿಕೆರೆಯಲ್ಲಿ ಸೂರ್ಯಘರ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:46 IST
Last Updated 11 ಸೆಪ್ಟೆಂಬರ್ 2025, 6:46 IST
ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸಾರ್ವಜನಿಕರು ಮನೆ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿ ವಿದ್ಯುತ್‌ ಬಳಸಿ ಸ್ವಾವಲಂಬಿಯಾಗಿರುವ ಚಿತ್ರ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸಾರ್ವಜನಿಕರು ಮನೆ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿ ವಿದ್ಯುತ್‌ ಬಳಸಿ ಸ್ವಾವಲಂಬಿಯಾಗಿರುವ ಚಿತ್ರ.   

ಹುಣಸೂರು: ಬಿಳಿಕೆರೆ ಗ್ರಾಮ ವಿದ್ಯುತ್ ಸ್ವಾವಲಂಬಿಯಾಗುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಪ್ರಧಾನಮಂತ್ರಿ ಸೂರ್ಯಘರ್‌ ಮುಫ್ತ್‌ ಬಿಜಿಲಿ ಯೋಜನೆ’ ಅನುಷ್ಠಾನಕ್ಕೆ ಸ್ಥಳೀಯ ಆಡಳಿತ ಸಕಲ ಸಿದ್ಧತೆ ನಡೆಸಿದೆ.

2024-25ನೇ ಸಾಲಿನಲ್ಲಿ ‘ಪಿ.ಎಂ. ಸೂರ್ಯಘರ್‌ ಯೋಜನೆ’ಗೆ 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಈ ಪಟ್ಟಿಯಲ್ಲಿದ್ದು, ಸೌರ ಶಕ್ತಿ ಬಳಸಿ ಮಾದರಿ ಗ್ರಾಮವಾಗಿಸುವ ದಿಕ್ಕಿನಲ್ಲಿ ಸೆಸ್ಕ್‌ ಮತ್ತು ಗ್ರಾಮ ಪಂಚಾಯಿತಿ ಕಾರ್ಯೋನ್ಮುಖವಾಗಿವೆ.

‘ಪ್ರಸಕ್ತ ದಿನದಲ್ಲಿ ವಿದ್ಯುತ್‌ ಬಳಕೆ ಹೊರೆಯಾಗುತ್ತಿದ್ದು, ಮುಕ್ತಗೊಳಿಸುವ ಉದ್ದೇಶದಿಂದ ಪಿ.ಎಂ. ಸೂರ್ಯಘರ್‌ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆ ಯಶಸ್ವಿಗೊಳಿಸಲು ಸೆಸ್ಕ್‌ ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಿ ತಾಂತ್ರಿಕ ಸಹಾಯ ನೀಡುತ್ತಿದೆ. ಇಲಾಖೆ  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದು  ಬಿಳಿಕೆರೆ ಸೆಸ್ಕ್‌ ಎಇಇ ಅನಿಲ್ ಸಿ.‌ ತಿಳಿಸಿದರು.

ADVERTISEMENT

₹1 ಕೋಟಿ: ‘ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ  ಅನುದಾನ ನೀಡುತ್ತಿಲ್ಲ. ಬದಲಿಗೆ ಮುಂದಿನ 6 ತಿಂಗಳೊಳಗಾಗಿ ಅತಿ ಹೆಚ್ಚು ಸೌರಶಕ್ತಿ ಅಳವಡಿಸಿದ ಗ್ರಾಮಕ್ಕೆ ₹ 1 ಕೋಟಿ ಸಹಾಯ ಧನ ನೀಡಲಿದೆ. ಈ ಅನುದಾನ ಬಳಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಪಂಚಾಯಿತಿಗೆ ನೀಡಿದೆ. ಪ್ರತಿ ಪಂಚಾಯಿತಿಯ ವಾರ್ಷಿಕ ವಿದ್ಯುತ್‌ ಬಳಕೆ ಬಿಲ್‌ ಪಾವತಿಸುವುದು  ಬೊಕ್ಕಸಕ್ಕೆ ಹೊರೆ ಆಗುತ್ತಿದ್ದು, ಸೌರ ಶಕ್ತಿ ಬಳಸುವುದರಿಂದ ವಿದ್ಯುತ್‌ ಬಿಲ್‌ ಹೊರೆ ತಗ್ಗಲಿದೆ. ಪಂಚಾಯಿತಿ ಉತ್ಪಾದಿಸುವ ವಿದ್ಯುತ್‌ ಸೆಸ್ಕ್‌ ಪವರ್‌ ಗ್ರಿಡ್‌ ಪ್ರತಿ ಯುನಿಟ್‌ಗೆ ₹ 3.08 ರಂತೆ ಖರೀದಿಸುವುದರಿಂದ ಲಾಭ ಸಿಗಲಿದೆ’ ಎಂದರು .

‘ಬಿಳಿಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸೋಲಾರ್‌ ವಿದ್ಯುತ್‌ 3 ಕಿ.ವ್ಯಾಟ್‌ ಉತ್ಪತ್ತಿ ಮಾಡುತ್ತಿದ್ದೇವೆ.  ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸೋಲಾರ್‌ ದೀಪ ಬಳಸುತ್ತಿದ್ದು ಸರ್ಕಾರಿ ಕಚೇರಿಯಲ್ಲಿ ಪ್ಯಾನೆಲ್‌ ಅಳವಡಿಸಲು ಮುಂದಿನ ವಾರ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಷ್ಠಾನ ಮಾಡುತ್ತೇವೆ  ಎಂದು ಬಿಳಿಕೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ತಿಳಿಸಿದರು. 

ಬಿಳಿಕೆರೆ ಗ್ರಾಮದಲ್ಲಿ ವಿವಿಧ ರಸ್ತೆಯಲ್ಲಿ ಅಳವಡಿಸಿರುವ ಸೋಲಾರ್‌ ಮಿನಿ ಹೈ ಮಾಸ್ಕ್ ಬೀದಿ ದೀಪ.
ಸಿ.ಅನಿಲ್‌ ಎಇಇ ಸೆಸ್ಕ್‌ ಬಿಳಿಕೆರೆ ವಿಭಾಗ
ಪುಷ್ಪಲತಾ ಬಿಳಿಕೆರೆ ನಿವಾಸಿ ಯೋಜನೆ ಫಲಾನುಭವಿ
ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸಾರ್ವಜನಿಕರು ಮನೆ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿ ವಿದ್ಯುತ್‌ ಬಳಸಿ ಸ್ವಾವಲಂಬಿಯಾಗಿರುವ ಚಿತ್ರ.
ಕೇಂದ್ರ ಸರ್ಕಾರದ ಈ ಯೋಜನೆ ಸಾರ್ವಜನಿಕರು ವಿದ್ಯುತ್‌ ಸ್ವಾವಲಂಬಿಯಾಗಲು ಪೂರಕವಾಗಿದ್ದು ಸರ್ಕಾರ ಸಬ್ಸಿಡಿ ನೀಡುತ್ತಿದೆ. ಸ್ಥಳೀಯ ಆಡಳಿತದ ಸಹಕಾರದಿಂದ ಬಿಳಿಕೆರೆ ನಿವಾಸಿಗಳು ಇದರ ಪ್ರಯೋಜನ ಪಡೆಯಬಹುದು
ಸಿ.ಅನಿಲ್‌ ಸೆಸ್ಕ್‌ ಎಇಇ ಬಿಳಿಕೆರೆ
ಪಿಎಂ ಸೂರ್ಯಘರ್‌ ಯೋಜನೆಯಲ್ಲಿ 3 ಕಿಲೋ ವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆಗೆ ಪ್ಯಾನೆಲ್‌ ಅಳವಡಿಸಿಕೊಂಡಿದ್ದು ಮನೆ ಬಳಕೆಗೆ ತಿಂಗಳಿಗೆ 150 ಯುನಿಟ್‌ ಬಳಸಿ ಉಳಿದ ವಿದ್ಯುತ್‌ ಸೆಸ್ಕ್‌ ಗೆ ಮಾರಾಟ ಮಾಡುತ್ತಿದ್ದೇನೆ.
ಪುಷ್ಪಲತಾ ಫಲಾನುಭವಿ ಬಿಳಿಕೆರೆ
‘ಜನ ಜಾಗೃತಿ’
ಬಿಳಿಕೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮಾತನಾಡಿ ‘ಯೋಜನೆ ಕುರಿತು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಮನೆಗಳ ಪಟ್ಟಿ ಸಿದ್ಧಪಡಿಸುತ್ತಿದ್ದು ಸೌರ ಪ್ಯಾನೆಲ್‌ ಮತ್ತು ಲಾಭದ ಕುರಿತು ಅರಿವು ಮೂಡಿಸಿದ್ದೇವೆ. ಯೋಜನೆ ಫಲಾನುಭವಿಗೆ ರಾಷ್ಟ್ರೀಕೃತ ಬ್ಯಾಂಕ್‌ ಗಳಿಂದ ₹ 2 ರಿಂದ ₹ 2.50 ಲಕ್ಷದವರೆಗೆ ಸಾಲ  ಸಿಗಲಿದೆ ಎಂದು  ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.