ಮೈಸೂರು: ಮೈಸೂರು ಕಲಾವಿದರ ಒಕ್ಕೂಟದ ವತಿಯಿಂದ ಚಾಮುಂಡಿಪುರಂ ವೃತ್ತದ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಡಿಟಿಎಸ್ ಫೌಂಡೇಷನ್ ಅಧ್ಯಕ್ಷ ಡಿ.ಟಿ.ಪ್ರಕಾಶ್, ಎಸ್‌ಪಿಬಿ ಅವರು 14 ಭಾಷೆಗಳಲ್ಲಿ ಸುಮಾರು 40 ಸಾವಿರ ಹಾಡಿದ್ದು, ಅವುಗಳು ಅವಿಸ್ಮರಣೀಯವಾಗಿವೆ ಎಂದರು.
ವಿದ್ಯಾರಣ್ಯಪುರಂ ಸಿಪಿಐ ಮಂಜುನಾಥ್ ಮಾತನಾಡಿ, ಅವರು ಹಾಡಿರುವ ಹಾಡುಗಳನ್ನು ಕೇಳಿದರೆ ಭಾಷಾಭಿಮಾನ ಹೆಚ್ಚುತ್ತದೆ. ಅವರ ಹಾಡುಗಳಿಂದಲೇ ಹಲವಾರು ಸಿನಿಮಾಗಳು ಪ್ರಸಿದ್ಧಿ ಪಡೆದಿವೆ ಎಂದರು.
ಯುವ ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಎಸ್‌ಪಿಬಿ ಅವರ ಪರಿಕಲ್ಪನೆಯಿಂದ ಲಕ್ಷಾಂತರ ಮಕ್ಕಳು ಎಳೆಯ ವಯಸ್ಸಿನಲ್ಲೇ ಸಂಗೀತಾಸಕ್ತಿ ಬೆಳೆಸಿಕೊಂಡಿದ್ದಾರೆ. ಎಸ್‌ಪಿಬಿ ಅವರಿಗೆ ಭಾರತರತ್ನ ನೀಡಬೇಕು ಎಂದು ಮನವಿ ಮಾಡಿದರು.
ಮಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಸುನೀಲ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಉದ್ಯಮಿ ಅಪೂರ್ವ ಸುರೇಶ್, ಕಲಾವಿದರಾದ ರಾಘವೇಂದ್ರ ಪ್ರಸಾದ್, ಎಂ.ಪಿ.ವರ್ಷ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಯೋಗೇಶ್ ನಾಯ್ಡು, ವಿನಯ್ ಕಣಗಾಲ್, ನವೀನ್ ಕೆಂಪಿ, ಸುಚೀಂದ್ರ, ಪ್ರಶಾಂತ್, ಕಲಾವಿದರಾದ ಮೈಕ್ ಚಂದ್ರು, ಪ್ರಸನ್ನ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.