ADVERTISEMENT

KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ತಿ.ನರಸೀಪುರ ಬಂದ್‌ಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:14 IST
Last Updated 2 ಮಾರ್ಚ್ 2026, 4:14 IST
<div class="paragraphs"><p>ತಿ.ನರಸೀಪುರ ಪಟ್ಟಣದ ಕೆಎಸ್ಐಸಿ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಬೆಂಬಲ‌‌ ಸೂಚಿಸಿದರು</p></div>

ತಿ.ನರಸೀಪುರ ಪಟ್ಟಣದ ಕೆಎಸ್ಐಸಿ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಬೆಂಬಲ‌‌ ಸೂಚಿಸಿದರು

   

ತಿ.ನರಸೀಪುರ: ಕೆಎಸ್ಐಸಿ‌ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಕಾರ್ಮಿಕರು, ಪರಿಸರಪ್ರೇಮಿಗಳು  ನಡೆಸುತ್ತಿರುವ ಕಾರ್ಖಾನೆ ಉಳಿಸಿ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಭಾನುವಾರ ಭಾಗವಹಿಸಿ ಬೆಂಬಲ ಸೂಚಿಸಿದರು.

ಸಂಘದ ರಾಜ್ಯ ಸಂಘಟನಾ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ‘ಕಾರ್ಖಾನೆ, ಪರಿಸರ ಹಾಗೂ ರೈತರು, ಕಾರ್ಮಿಕರ ಉಳಿವಿಗಾಗಿ ನಿಮ್ಮ‌ ಜತೆ ನಾವಿದ್ದು, ಹೋರಾಟವನ್ನು‌ ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

‘ಕಾರ್ಮಿಕರ ಹೋರಾಟ, ನಮ್ಮ ಮನವಿಯನ್ನು‌ ಪರಿಗಣಿಸದಿದ್ದಲ್ಲಿ ಹೋರಾಟ ಮುಂದುವರಿಸಲಿದ್ದು, ತಿ. ನರಸೀಪುರ ಬಂದ್‌ಗೂ ಚಿಂತನೆ ಮಾಡಬೇಕಾಗುತ್ತದೆ. ಈ ಬಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ರೈತ ಸಂಘದ ಹೋರಾಟದ ವೇಳೆ ನಮ್ಮ ರಾಜ್ಯ ರೈತ ನಾಯಕರು ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ‌ ಸೆಳೆಯುತ್ತಾರೆ’ ಎಂದು ತಿಳಿಸಿದರು

ಜಿಲ್ಲಾ ಘಟಕದ ಹೊಸಕೋಟೆ ರಘು ಶ್ರೀಕಂಠ, ಬಸಪ್ಪ, ಚಂದ್ರು, ಮಹೇಶ, ಮಾದೇವ ನಾಯಕ, ತಾಲ್ಲೂಕು ಅಧ್ಯಕ್ಷ ಕರೋಹಟ್ಟಿ
ಕುಮಾರಸ್ವಾಮಿ, ಬೂದಹಳ್ಳಿ ಶಂಕರ್, ಇ. ರಾಜು, ಹಲವಾರ ಮಹದೇವಸ್ವಾಮಿ, ಬೇವಿನಹಳ್ಳಿ ರವಿ, ಪರಿಸರ ಬಳಗದ ಪರಶುರಾಮ್ ಗೌಡ, ಕೊತ್ತೇಗಾಲ ಶಾಂತಮೂರ್ತಿ, ಸುಜ್ಜಲೂರು ಚಂದ್ರು,‌ ಕಳ್ಳಿಪುರ ನಾರಾಯಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.