ADVERTISEMENT

ಸ್ವಮೂತ್ರಪಾನ ಪಾಠವಿಲ್ಲ: ಕುಲಸಚಿವ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:36 IST
Last Updated 18 ನವೆಂಬರ್ 2022, 21:36 IST
   

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಷಯ ಅಧ್ಯಯನ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ 5ನೇ ಸೆಮಿಸ್ಟರ್‌ನಲ್ಲಿ ವೈದ್ಯಕೀಯ ಸಮಾಜಶಾಸ್ತ್ರ ಪಠ್ಯಕ್ರಮ ನೀಡಲಾಗಿದ್ದು, ಪಠ್ಯಕ್ರಮದಲ್ಲಿ ಏಡ್ಸ್, ಕ್ಯಾನ್ಸರ್‌ಗೆ ಸ್ವಮೂತ್ರ ಪಾನವೇ ಮದ್ದು ಎಂಬ ಪಾಠವಿಲ್ಲ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ ತಿಳಿಸಿದ್ದಾರೆ.

‘15 ಪರಾಮರ್ಶನ ಪುಸ್ತಕಗಳನ್ನು ಹೆಸರಿಸಲಾಗಿದ್ದು, ಅದರಲ್ಲಿ ಬೈರಪ್ಪ ಅವರ ಪುಸ್ತಕವೂ ಇದೆ. ಅದು ಪಠ್ಯ ಪುಸ್ತಕವಲ್ಲ’ ಎಂದಿದ್ದಾರೆ.

‘ಪರಾಮರ್ಶನ ಗ್ರಂಥಗಳ ಪಟ್ಟಿಯಲ್ಲಿರುವಕೆ.ಬೈರಪ್ಪನವರ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕದಲ್ಲಿ ಆ ಮಾಹಿತಿ ಬಂದಿದೆ. ಅದು ಲೇಖಕರ ಅಭಿಪ್ರಾಯವೇ ಹೊರತು. ವಿಶ್ವವಿದ್ಯಾಲಯದ ಅಭಿಪ್ರಾಯವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.