
ಹುಲಿ (ಪ್ರಾತಿನಿಧಿಕ ಚಿತ್ರ)
ಸರಗೂರು: ತಾಲ್ಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಹಳೆ ಹೆಗ್ಗುಡಿಲು ಗ್ರಾಮದ ನಿವಾಸಿ ದಂಡನಾಯಕ(33) ಮೃತ ವ್ಯಕ್ತಿ. 'ಬೆಳಿಗ್ಗೆ ಟೀ ಕುಡಿಯಲು ಅಂಗಡಿಗೆ ತೆರಳಿದ್ದು, ಮನೆಗೆ ವಾಪಸ್ ಆಗುವಾಗ ಹುಲಿ ದಾಳಿ ನಡೆಸಿದ್ದು, ಮೃತದೇಹವನ್ನು ಆನೆ ದಾಟದಂತೆ ಮಾಡಲು ನಿರ್ಮಿಸಿರುವ ಕಂದಕಕ್ಕೆ ಎಳೆದೊಯ್ದಿದೆ' ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೂರನೇ ಬಲಿ: ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮೂರನೇ ಬಲಿಯಾಗಿದೆ. ತಾಲ್ಲೂಕಿನ ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ರಾಜಶೇಖರ್ ಹಾಗೂ ದೊಡ್ಡನಿಂಗಯ್ಯ ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಹತ್ತಿ ಬಿಡಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೂ ಹುಲಿ ದಾಳಿ ನಡೆಸಿದ್ದು, ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿ ದಾಳಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.