ಮೈಸೂರು: ಇಬ್ಬರು ಕೊರೊನಾ ಸೋಂಕಿತರು ತಪ್ಪು ವಿಳಾಸ ಮತ್ತು ತಪ್ಪು ಮೊಬೈಲ್ ಸಂಖ್ಯೆ ನೀಡಿದ್ದು, ಅವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
‘ಮೂರು ದಿನಗಳ ಹಿಂದೆಯಷ್ಟೇ ಇವರು ತಮ್ಮ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿದ್ದರು. ವರದಿಯು ಪಾಸಿಟಿವ್ ಬಂದಿದೆ. ಆದರೆ, ಅವರು ನೀಡಿದ ವಿಳಾಸಕ್ಕೆ ಹೋದಾಗ ಅಲ್ಲಿರಲಿಲ್ಲ. ಮೊಬೈಲ್ ಸಂಖ್ಯೆಯನ್ನೂ ತಪ್ಪಾಗಿ ನೀಡಿದ್ದಾರೆ. ಆರೋಗ್ಯ ಇಲಾಖೆಯು ನಮಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.