ADVERTISEMENT

ತಿ.ನರಸೀಪುರ | ಕಾಂಗ್ರೆಸ್ ಸರ್ಕಾರ ರೈತರ ಪರ: ಸಂಸದ ಸುನಿಲ್ ಬೋಸ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:22 IST
Last Updated 19 ಫೆಬ್ರುವರಿ 2026, 4:22 IST
ತಿ.ನರಸೀಪುರ‌ ತಾಲ್ಲೂಕಿನ ಬನ್ನಹಳ್ಳಿ ಹುಂಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್‌ಬೋಸ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು
ತಿ.ನರಸೀಪುರ‌ ತಾಲ್ಲೂಕಿನ ಬನ್ನಹಳ್ಳಿ ಹುಂಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್‌ಬೋಸ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು   

ತಿ.ನರಸೀಪುರ: ‘ನಮ್ಮ‌ ಸರ್ಕಾರ ರೈತ ಪರ ಸರ್ಕಾರವಾಗಿದ್ದು, ರೈತರ ಪ್ರಗತಿಗೆ ಪೂರಕವಾಗಿ ₹100 ಕೋಟಿ ವೆಚ್ಚದಲ್ಲಿ ಉಕ್ಕಲಗೆರೆ- ಹಲವಾರ ನಾಲಾ ಅಭಿವೃದ್ಧಿಗೆ ಫೆ. 21ರಂದು ಚಾಲನೆ ನೀಡಲಾಗುವುದು’ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.

ತಾಲ್ಲೂಕಿನ ಸೋಸಲೆ, ವ್ಯಾಸರಾಜಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ‌ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಈಗಾಗಲೇ ಕಳೆದ ವರ್ಷ ಬನ್ನೂರು ವ್ಯಾಪ್ತಿಯ ತುರುಗನೂರು ನಾಲೆಯ ₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ. ಎಸ್ಇಪಿ ಯೋಜನೆಯಲ್ಲಿ ₹3.05 ಕೋಟಿ ಹಾಗೂ ಸಾಮಾನ್ಯ ವರ್ಗದ ಯೋಜನೆಯಡಿ ಅಭಿವೃದ್ಧಿಗೆ ₹3.10 ಕೋಟಿ ಒಟ್ಟು ₹6.15 ಲಕ್ಷ ವೆಚ್ಚದಲ್ಲಿ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು 15 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಕ್ಷೇತ್ರದ ಜನರು ನಮ್ಮ‌ ತಂದೆ ಹಾಗೂ ನನ್ನನ್ನು ಆಶೀರ್ವದಿಸಿದ್ದು, ಅಭಿವೃದ್ಧಿ ಮೂಲಕ ಋಣ ತೀರಿಸಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಇನ್ನೂ ಹೆಚ್ಚಿನ‌ ಅಭಿವೃದ್ಧಿಗೆ ಅನುದಾನ ತರುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದಸರಾ ಉದ್ಘಾಟನೆ ಹಾಗೂ ಬಾವುಟ ಹಾರಿಸುವುದಕ್ಕಷ್ಟೇ ಸೀಮಿತರು ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಬೋಸ್, ‘ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ತಂದೆ ಅಪಾರ ಕೊಡುಗೆ ನೀಡಿದ್ದಾರೆ. ನೂರಾರು ಕೋಟಿ ರೂಪಾಯಿಗಳ ಅನುದಾನ‌ ನೀಡಿದವರು ಯಾರು ಎಂಬುದನ್ನು ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಸರ್ಕಾರ ಇದ್ದ ವೇಳೆ ಅವರು ರಾಜ್ಯಕ್ಕೆ ಕೊಟ್ಟ ಕೊಡುಗೆಯೇನು ಎಂದು ಹೇಳಲಿ’ ಎಂದು ಸವಾಲು ಹಾಕಿದರು.

₹ 4.5 ಕೋಟಿ ಅನುದಾನ:

ಮಂಗಳವಾರ ಮೂಗೂರು ಹೋಬಳಿ ವ್ಯಾಪ್ತಿಯ ಕರೋಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಈಗ ₹4.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹20 ಲಕ್ಷ ವೆಚ್ಚದಲ್ಲಿ ಬನ್ನಹಳ್ಳಿ ಹುಂಡಿ ಗ್ರಾಮದ ಸಾಮಾನ್ಯ ವರ್ಗದ ಬೀದಿಯ ರಸ್ತೆ ಕಾಮಗಾರಿಗೆ ಸಂಸದರು ಭೂಮಿ ಪೂಜೆ ನೆರವೇರಿಸಿದರು.

ಕರೋಹಟ್ಟಿ, ವಾಟಾಳು, ಹ್ಯಾಕನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಮಾನ್ಯ ವರ್ಗದ ಕಾಲೊನಿ ಹಾಗೂ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನೀಡಲಾಯಿತು.

ತಹಶೀಲ್ದಾರ್ ಟಿ.ಜಿ. ಸುರೇಶಾಚಾರ್, ಪ್ರಭಾರ ಇಒ ರಂಗಸ್ವಾಮಿ, ಎಇಇ ಪಿ.ಎನ್. ಚರಿತಾ, ಎಇಇ ಸತೀಶ್ ಚಂದ್ರ, ಶಿವರಾಜು, ಸೆಸ್ಕ್‌ ಎಇಇ ವೀರೇಶ್, ಸಹಾಯಕ ನಿರ್ದೇಶಕರಾದ ಶಾಂತಾ, ಶ್ವೇತಾ, ರೂಪಾ, ಬಿಸಿಎಂ ಇಲಾಖೆ ರಾಜಣ್ಣ, ಸಿಡಿಪಿಒ ಗೋವಿಂದರಾಜು, ಲಕ್ಷ್ಮೀಶ್, ಆಹಾರ ಇಲಾಖೆ ಸದಾನಂದ, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಮುಖಂಡರಾದ ಹೊನ್ನನಾಯಕ, ಉಕ್ಕಲಗೆರೆ ಬಸವಣ್ಣ, ಕೆಬ್ಬೆ ಶಿವಸ್ವಾಮಿ,ದೊಡ್ಡ ಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ರಂಗಪ್ಪ, ಸಿದ್ದನಹುಂಡಿ ಸೋಮಣ್ಣ, ನಟರಾಜು, ಮಲ್ಲೇಶ್, ನಾರಾಯಣ,ಸುರೇಶ, ಗದ್ದಮೋಳೆ ಸಿದ್ದರಾಜು ಮಹೇಶ್, ಸೋಸಲೆ, ಪರಶಿವಮೂರ್ತಿ, ಕನ್ನನಾಯಕನಹಳ್ಳಿ ಕುಮಾರ, ಶ್ರೀ ರಂಗರಾಜಪುರ ರಾಜೇಶ್ ಹಾಜರಿದ್ದರು.

ತಿ.ನರಸೀಪುರ‌ ತಾಲ್ಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್ ‌ಬೋಸ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.