ಬೆಟ್ಟದಪುರ (ಮೈಸೂರು ಜಿಲ್ಲೆ): ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಇಲ್ಲಿನ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಿ ದೇವರ ದರ್ಶನ ಪಡೆದರು.
ಬರೋಬ್ಬರಿ 3,108 ಮೆಟ್ಟಿಲುಗಳಿರುವ ಈ ಬೆಟ್ಟವನ್ನು ಅವರು ಇದೇ ಮೊದಲ ಬಾರಿಗೆ ಹತ್ತಿದರು. ಬೆಳಿಗ್ಗೆಯೇ ಬಂದ ಅವರು, ‘ದೀಪಾವಳಿ ಅಮಾವಾಸ್ಯೆ’ ನಿಮಿತ್ತ ಭಕ್ತರೊಂದಿಗೆ ಚುಮುಚುಮು ಚಳಿ ಹಾಗೂ ಮಂಜಿನ ನಡುವೆ ಬೆಟ್ಟ ಏರಿ, ಇಳಿದರು.
‘ದೇವರ ದರ್ಶನ ಧನ್ಯತಾ ಭಾವ ಮೂಡಿಸಿತು. ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸಿದ್ದೇನೆ. ಬೆಟ್ಟದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಬದ್ಧನಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.