ಕವಿತಾಳ: ಪಟ್ಟಣದಲ್ಲಿ 82 ವರ್ಷಗಳ ಹಿಂದೆ ಸ್ಥಾಪಿತವಾದ ಯೇಸುವಿನ ಪುನರುತ್ಥಾನ ದೇವಾಲಯ ಕೆಥೋಲಿಕ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಗಮಗಿಸುವ ವಿದ್ಯುತ್ ದೀಪಗಳು, ಸಂತ ಮೇರಿ ಮಾತೆಯ ಅಲಂಕಾರ ಸೇರಿದಂತೆ ಆವರಣದಲ್ಲಿ ನಿರ್ಮಿಸಿದ ವಿವಿಧ ಮಾದರಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ದನದ ಕೊಟ್ಟಿಗೆಯಲ್ಲಿ ಯೇಸುವಿನ ಜನನವಾದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಗೋದಲಿ ಆಕರ್ಷಕವಾಗಿದೆ. ಅದೇ ರೀತಿ ಪಟ್ಟಣದ ಪೊಲೀಸ್ ಠಾಣೆ, ಆಸ್ಪತ್ರೆ, ನವಚೇತನ ಶಾಲೆ, ತ್ರಯಂಭಕೇಶ್ವರ ದೇವಸ್ಥಾನ, ಮಸೀದಿ ಮತ್ತಿತರ ಪ್ರಮುಖ ಸ್ಥಳಗಳ ಮಾದರಿಗಳು ಗಮನ ಸೆಳೆಯುತ್ತಿವೆ.
ಕ್ರಿಸ್ತನ ಜನನ ಕುರಿತು ಮಂಗಳವಾರ ರಾತ್ರಿ ಕ್ಯಾರೆಲ್ಸ್ ಹಾಡುಗಳ ಮೂಲಕ ರೂಪಕ ನಡೆಯಲಿದೆ ಮತ್ತು ಬುಧವಾರ ಕ್ರಿಸ್‌ಮಸ್ ಅಂಗವಾಗಿ ದಿವ್ಯ ಬಲಿಪೂಜೆ ಸೇರಿದಂತೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ.
‘ದೀರ್ಘ ಕಾಲದ ಇತಿಹಾಸ ಹೊಂದಿರುವ ಚರ್ಚ್ ಕವಿತಾಳ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಭಕ್ತರನ್ನು ಹೊಂದಿದೆ. ಬಡ ಕುಟುಂಬದ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುವುದು ಇಲ್ಲಿನ ವಿಶೇಷ’ ಎಂದು ಫಾದರ್ ಆನಂದ ಪ್ರಸಾದ ತಿಳಿಸಿದರು.
ಕೆಂಪು ಉಡುಪು, ತಲೆ ಮೇಲೆ ಕೆಂಪು ಬಣ್ಣದ ಉದ್ದನೆ ಟೋಪಿ ಧರಿಸಿ ಬಿಳಿ ಗಡ್ಡ ಬಿಟ್ಟ ಮರದ ಕೊಂಬೆಯ ಮೇಲೆ ಕುಳಿತು ಸಾರ್ವಜನಿಕರನ್ನು ಸ್ವಾಗತಿಸುತ್ತಿರುವ ‘ಸಾಂತಾಕ್ರೂಜ್’ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಯೇಸುವಿನ ಜನ್ಮದಿನ ಕ್ರಿಸ್‌ಮಸ್ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಚರ್ಚ್‌ಗೆ ಬರುವ ಭಕ್ತರಿಗೆ ಕೇಕ್ ವಿತರಣೆ ಸೇರಿದಂತೆ ವಿಶೇಷ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿದೆಆನಂದ ಪ್ರಸಾದ ಚರ್ಚ್ ಫಾದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.