ADVERTISEMENT

ಹಟ್ಟಿಚಿನ್ನದಗಣಿ: ಪಾಳುಬಿದ್ದ ಹೈಟೆಕ್ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 15:23 IST
Last Updated 14 ಫೆಬ್ರುವರಿ 2024, 15:23 IST
ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯಲ್ಲಿ ಪಾಳು ಬಿದ್ದ ಹೈಟೆಕ್ ಶೌಚಾಲಯ  
ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯಲ್ಲಿ ಪಾಳು ಬಿದ್ದ ಹೈಟೆಕ್ ಶೌಚಾಲಯ     

ಹಟ್ಟಿಚಿನ್ನದಗಣಿ: ಸ್ಧಳೀಯ ಧಾರುವಾಲ ಕ್ರೀಡಾಗಣದ ಹತ್ತಿರ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಹೈಟೆಕ್ ಶೌಚಾಲಯ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.

ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ 2012-13ನೇ ಸಾಲಿನಲ್ಲಿ ಸಿಎಫ್‌ಸಿ ಯೋಜನೆಯಡಿ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಆಗದೆ ಇರುವುದರಿಂದ ಹೈಟೆಕ್ ಶೌಚಾಲಯ ಸುತ್ತಲೂ ಮುಳ್ಳುಗಟ್ಟಿಗಳು ಬೆಳೆದು ನಿಂತಿವೆ. ಇದರಿಂದ ಶೌಚಾಲಯ ಸಾರ್ವಜನಿಕರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ. ಧಾರುವಾಲ ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆ ಬರುವ ಮಹಿಳೆಯರು, ಮಕ್ಕಳಿಗೆ ಉಪಯೋಗವಾಗಬೇಕಿದ್ದ ಹೈಟೆಕ್ ಶೌಚಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ‌.  

ಶೌಚಾಲಯದ ಬಾಗಿಲು ಹಾಗೂ ಕಿಟಕಿಗಳ ಗಾಜುಗಳನ್ನು ಕಿಡಿಗೇಡಿಗಳು ಹೊಡೆದು ಹಾಕಿದ್ದಾರೆ. ಸಂಜೆ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ನಿವಾಸಿಗಳು ದೂರಿದ್ದಾರೆ. ಶೌಚಾಲಯಗಳನ್ನು ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರು ಇತ್ತ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುವುದು ಇಲ್ಲಿನ ಜನರು ಆರೋಪವಾಗಿದೆ.

ADVERTISEMENT

ಭರವಸೆ: ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಗೆ ಬರುವ ಶೌಚಾಲಯದ ಬಗ್ಗೆ ಮಾಹಿತಿ ಪಡೆದುಕೊಂಡು ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಸೂಚಿತ ಪ್ರದೇಶ ಸಮಿತಿ ಮುಖ್ಯಾಧಿಕಾರಿ ಜಗನ್ನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.