ADVERTISEMENT

ಹಸಿ ಮೆಣಸಿನಕಾಯಿ, ದಾಳಿಂಬೆ, ಮಾವು ಬೆಳೆ ವಿಮೆಗಾಗಿ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 14:07 IST
Last Updated 16 ಜುಲೈ 2024, 14:07 IST

ಶಕ್ತಿನಗರ: ಹವಾಮಾನ ಅಧರಿತ ಬೆಳೆ ವಿಮೆ ಯೋಜನೆ–2024ರ ಮುಂಗಾರು ಹಂಗಾಮಿನಲ್ಲಿ ಹಸಿ ಮೆಣಸಿನಕಾಯಿ, ದಾಳಿಂಬೆ ಮತ್ತು ಮಾವು ಬೆಳೆಗಾರರಿಗೆ ವಿಮಾ ಕಂತು ಕಟ್ಟಲು ಕೊನೆಯ ದಿನಾಂಕ ಜುಲೈ 31ವರೆಗೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಸಿ ಮೆಣಸಿನಕಾಯಿ, ಬೆಳೆಗೆ ಪ್ರತಿ ಹೆಕ್ಟರ್ ವಿಮಾ ಮೊತ್ತ ₹71 ಸಾವಿರ ಇದ್ದು, ವಿಮಾ ಕಂತಿನ ಮೊತ್ತ ₹3,550ರೂಪಾಯಿ, ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟರ್‌ಗೆ ವಿಮಾ ಮೊತ್ತ ₹1.27 ಲಕ್ಷ ಇದ್ದು, ವಿಮಾ ಕಂತಿನ ಮೊತ್ತ ₹6,350 ಇದೆ. ಮಾವು ಬೆಳೆಗಾರರಿಗೆ ಪ್ರತಿ ಹೆಕ್ಟರ್‌ಗೆ ವಿಮಾ ಮೊತ್ತ ₹8 ಸಾವಿರ ಇದ್ದು ವಿಮಾ ಕಂತಿನ ಮೊತ್ತ ₹4ಸಾವಿರ ಇದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.