ಲಿಂಗಸುಗೂರು: ಕೋಚಿಂಗ್ ಸೆಂಟರ್ ಹಾಗೂ ವಸತಿ ನಿಲಯ ಎಂದು ನಾಮಫಲಕ ಹಾಕಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಕೂಡಲೇ ಬಂದ್ ಮಾಡಬೇಕು ಎಂದು ಬಿಇಒ ಹುಂಬಣ್ಣ ರಾಠೋಡ್ ಸೂಚನೆ ನೀಡಿದ್ದಾರೆ.
ಪಟ್ಟಣ ಸೇರಿದಂತೆ ಹಟ್ಟಿ, ಮುದಗಲ್, ಗುರುಗುಂಟಾ ಸೇರಿ ಇತರೆ ಹಳ್ಳಿಗಳಲ್ಲಿ ಅನಧಿಕೃತವಾಗಿ ಕೋಚಿಂಗ್ ಸೆಂಟರ್ ಮತ್ತು ವಸತಿ ನಿಲಯ ಎಂದು ನಾಮಫಲಕ ಹಾಕಿಕೊಂಡು ಬೇಸಿಗೆ ಶಿಬಿರ, ಟ್ಯೂಟೋರಿಯಲ್ ನಡೆಸುತ್ತಿದ್ದಾರೆ. ಅವುಗಳನ್ನು ಶಾಶ್ವತವಾಗಿ ಮುಚ್ಚಿಸುವಂತೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ದಾಳಿ ಮಾಡಿ 10ಕ್ಕೂ ಅಧಿಕ ನೋಟಿಸ್ ನೀಡಿ ಹಾಗೂ ದೃಢಿಕರಣ ಪಡೆದು ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ತಿಳಿಸಿದರೂ ಶಿಕ್ಷಣ ಇಲಾಖೆಯ ಗಮನಕ್ಕೆ ಬಾರದ ರೀತಿಯಲ್ಲಿ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದಾರೆ. ಅಂತಹ ಸೆಂಟರ್‌ಗಳನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದಾರೆ.
ಲಿಂಗಸುಗೂರಿನಲ್ಲಿ ಎಕ್ಸಪರ್ಟ್ ಟ್ಯೂಟೋರಿಯಲ್, ಓಂಕಾರ ಕೋಚಿಂಗ್ ಸೆಂಟರ್, ಬ್ಲೂಬರ್ಡ್ ಟ್ಯೂಟೋರಿಯಲ್, ಜ್ಞಾನಾಮೃತ, ಹಾಗೂ ಮಾತೋಶ್ರೀ ಟ್ಯೂಟೋರಿಯಲ್ ಅಂಕಲಿಮಠ ಈ ಐದು ಕೇಂದ್ರಗಳಿಗೆ ವಸತಿ ರಹಿತ ತರಗತಿಗಳನ್ನು ಡಿಡಿಪಿಐ ಅವರು ಅನುಮತಿ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.