ADVERTISEMENT

ಮುಳುಗಿದ ಸೇತುವೆ: ಜನರ ಹರಸಾಹಸ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:45 IST
Last Updated 15 ಆಗಸ್ಟ್ 2019, 19:45 IST
ಲಿಂಗಸುಗೂರಿನ ಜಲದುರ್ಗ ಸೇತುವೆ ಮೇಲ್ಭಾಗದಲ್ಲಿ ಗುರುವಾರ ನೀರು ಹರಿಯುತ್ತಿದ್ದರೂ ಜನ ಸಂಚರಿಸಿದರು – ಪ್ರಜಾವಾಣಿ ಚಿತ್ರ/ಬಿ.ಎ. ನಂದಿಕೋಲಮಠ
ಲಿಂಗಸುಗೂರಿನ ಜಲದುರ್ಗ ಸೇತುವೆ ಮೇಲ್ಭಾಗದಲ್ಲಿ ಗುರುವಾರ ನೀರು ಹರಿಯುತ್ತಿದ್ದರೂ ಜನ ಸಂಚರಿಸಿದರು – ಪ್ರಜಾವಾಣಿ ಚಿತ್ರ/ಬಿ.ಎ. ನಂದಿಕೋಲಮಠ   

ಲಿಂಗಸುಗೂರು: ಕೃಷ್ಣಾ ಪ್ರವಾಹದಿಂದ ಶೀಲಹಳ್ಳಿ, ಯರಗೋಡಿ ಮತ್ತು ಜಲದುರ್ಗ ಸೇತುವೆಗಳು ಮುಳುಗಡೆಯಾಗಿದ್ದು ನಡುಗಡ್ಡೆಗಳಲ್ಲಿ ಸಿಲುಕಿದ್ದ ಜನರು ಸ್ಥಳೀಯರ ನೆರವಿನಿಂದ ಗುರುವಾರ ಜಲದುರ್ಗ ಸೇತುವೆ ದಾಟಿದರು.

ನಾರಾಯಣಪುರ ಅಣೆಕಟ್ಟೆಯಿಂದ ಹೊರಹರಿವನ್ನು 5.46 ಲಕ್ಷ ಕ್ಯುಸೆಕ್‌ಗೆ ಇಳಿಸಿದ ಮಾಹಿತಿ ಸಿಕ್ಕ ಕೂಡಲೇ ಗುರುವಾರ ಬೆಳಗಿನ ಜಾವ ಗ್ರಾಮಸ್ಥರು, ಪ್ರವಾಸಿಗರು, ಕೃಷಿ ಚಟುವಟಿಕೆಗೆ ಬಂದು ಸಿಲುಕಿಕೊಂಡವರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮಮೂರ್ತಿ ಅವರನ್ನು ಸ್ಥಳೀಯರು ಜೀವದ ಹಂಗು ತೊರೆದು ಸೇತುವೆ ನದಿ ದಾಟಿಸಿದರು. ಜಲದುರ್ಗ ವೀಕ್ಷಣೆ ಮತ್ತು ಕೃಷಿ ಚಟುವಟಿಕೆಗೆ ಬಂದಿದ್ದ 30ಕ್ಕೂ ಹೆಚ್ಚು ಜನ ಅಲ್ಲಲ್ಲಿ ಸಿಲುಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT