ಮಾನ್ವಿ: ಪಟ್ಟಣದ ಜಗನ್ನಾಥ ದಾಸರ ಮಂದಿರದಲ್ಲಿ ಬೆಂಗಳೂರಿನ ರಾಮನಾರಾಯಣ ಗುರುಕುಲಂ ವತಿಯಿಂದ ಗುಡಿ ನಮನ -2025 ಕಾರ್ಯಕ್ರಮ ಶನಿವಾರ ಜರುಗಿತು.
ರಾಮನಾರಾಯಣ ಗುರುಕುಲಂ ಅಧ್ಯಕ್ಷ ಪಟ್ಟಭಿರಾಮ ಪಂಡಿತ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.
ಅಮೆರಿಕದ ಬೋಸ್ಟನ್ ನಗರದಿಂದ ಆಗಮಿಸಿದ್ದ ವಿದ್ವಾನ್ ಸುರಭಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಹನುಮಾನ್ ಚಾಲಿಸ್, ರೊಗಹರಣಿ, ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಹಾಗೂ ಜಗನ್ನಾಥ ವಿಠಲ ವಚನಗಳು ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
ಪಕ್ಕವಾದ್ಯದಲ್ಲಿ ಅಂತರಾಷ್ಟ್ರೀಯ ಸಂಗೀತ ಕಲಾವಿದರಾದ ವಿದ್ವಾನ ಹೇಮಿಜಿ. ಎಸ್. ಪ್ರಶಾಂತ ಅವರಿಂದ ವೀಣಾವದನ , ವಿದ್ವಾನ ಚಂದನ್ ಕುಮಾರ ಕೋಳಲು ವಾದನ, ವಿದ್ವಾನ ಚಾರುಲತಾ ರಾಮಾನುಜಂ ಪೀಟಿಲು ವಾದನ, ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ವಾದನದ ಮೂಲಕ ಸಾತ್ ನೀಡಿದರು. ತ್ರಯಾ ಅವರ ಸಂಗೀತ ಗಾಯನ ಗಮನ ಸೆಳೆಯಿತು.
ಬೆಳಿಗ್ಗೆ 10ಗಂಟೆಯಿಂದ ಸಂಜೆಯವರೆಗೂ 50ಕ್ಕೂ ಹೆಚ್ಚು ಕಲಾವಿದರು ನಿರಂತರವಾಗಿ ನಾದಸೇವೆ ಸಲ್ಲಿಸಿದರು. ನೂರಾರು ಜನರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸ್ತ್ರೀಯ ಸಂಗೀತ ಅಲಿಸಿದರು.
ಜಗನ್ನಾಥ ದಾಸರ ಮಂದಿರದ ಮಂದಿರದ ವ್ಯವಸ್ಥಾಪಕರಾದ ಶ್ರೀನಿವಾಸ ಕರ‍್ಲಹಳ್ಳಿ, ಜಗನ್ನಾಥಚಾರ್ ಪುರೋಹಿತ್, ಪ್ರವೀಣ್ ಕುಮಾರ, ವಿಜಯರಾವ್ ಕುಪನೇಶಿ, ವರದರಾಜ ಕುಲಕರ್ಣಿ, ಕೃಷ್ಣಮೂರ್ತಿ ಗುಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.