ADVERTISEMENT

ಹಟ್ಟಿ ಚಿನ್ನದ ಗಣಿ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ಅಮರೇಶ ನಾಯಕ
Published 25 ಡಿಸೆಂಬರ್ 2025, 5:43 IST
Last Updated 25 ಡಿಸೆಂಬರ್ 2025, 5:43 IST
ಹಟ್ಟಿ ಪಟ್ಟಣದ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ಗೋದಲಿ ನಿರ್ಮಿಸಿರುವುದು
ಹಟ್ಟಿ ಪಟ್ಟಣದ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ಗೋದಲಿ ನಿರ್ಮಿಸಿರುವುದು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದಲ್ಲಿರುವ ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತ ಸಮುದಾಯದ ಜನರ ಮನೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಆನ್ವರಿ, ಗುರುಗುಂಟಾ, ಚಿಕ್ಕನಗನೂರು, ಚುಕನಟ್ಟಿ, ಇತರೆ ಗ್ರಾಮದಲ್ಲಿ ಚರ್ಚ್‌ಗಳಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ. ಗುರುವಾರ (ಡಿ.25) ಕ್ರೈಸ್ತ ಸಮುದಾಯದ ಜನರು, ಮಕ್ಕಳು ಯೇಸುವಿನ ಪ್ರತಿಕೃತಿಯನ್ನು ಹಿಡಿದು ಚರ್ಚ್‌ಗೆ ಬಂದು ಯೇಸುವಿನ ಗೀತೆಗಳನ್ನು ಹಾಡಿದರು. ಧರ್ಮಗುರು ನೇತೃತ್ವದಲ್ಲಿ ಮಕ್ಕಳು ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಚರ್ಚ್‌ನಲ್ಲಿ ಸಂತಾಕ್ಲಾಸ್ ವೇಷಾಧಾರಿಯೊಬ್ಬರು ಮಕ್ಕಳಿಗೆ ಚಾಕೊಲೇಟ್‌ಗಳನ್ನು ನೀಡಿ ಅವರನ್ನು ಖುಷಿಪಡಿಸಿದರು.

ಹಟ್ಟಿ ಪಟ್ಟಣದ ಕ್ರೈಸ್ತ ಸಮುದಾಯದ ಜನರು ಮನೆಯಲ್ಲಿ ಗೋದಲಿ ಮಾಡಿರುವುದು. ಹೊಸ ಬಟ್ಟೆ, ವಸ್ತುಗಳ ಖರೀದಿಗಾಗಿ ಮಕ್ಕಳು ಮಹಿಳೆಯರು ಅಂಗಡಿಗಳಿಗೆ ತೆರಳುತ್ತಿದ್ದು, ವ್ಯಾಪಾರ ಜೋರಾಗಿತ್ತು. ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ರಸ್ತೆ ಪಕ್ಕದಲ್ಲಿ ಹೋಗುವ ಜನರಿಗೆ ಕಂಗೊಳಿಸುತ್ತಿದೆ. ಈಗಾಗಲೇ ಹಬ್ಬಕ್ಕೆ ಸಕಲ ಸಿದ್ಧತೆಗಳು ಚರ್ಚ್‌ಗಳಲ್ಲಿ ಫಾದರ್ ಗೋದಲಿಗಳನ್ನು ನಿರ್ಮಾಣ ಮಾಡಿ, ಯೇಸುವಿನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಅದಕ್ಕೆ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿವೆ.

ADVERTISEMENT

ಸಿಹಿತಿಂಡಿ ತಯಾರಿ: ಕ್ರಿಸ್‌ಮಸ್ ಹಬ್ಬ ಸಡಗರದಿಂದ ಆಚರಣೆ ಮಾಡಲು ಮಹಿಳೆಯರು ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿ ಮಾಡುತ್ತಿದ್ದಾರೆ. ಚಕ್ಕಲಿ, ಅದ್ರಸ್, ಪ್ಲಾವರ್ ಗೋಬಿ, ಗಾರ್ಗಿ, ಕೇಕ್, ಮುಂತಾದ ಸಿಹಿ ಪದಾರ್ಥಗಳನ್ನು ಮನೆಯಲ್ಲಿ ತಯಾರಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಸಮುದಾಯದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ.

ಹಟ್ಟಿ ಪಟ್ಟಣದ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ಗೋದಲಿ ನಿರ್ಮಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.