ADVERTISEMENT

ಮಸ್ಕಿ | ವಾಣಿಜ್ಯ ಮಳಿಗೆ ಭಸ್ಮ: ₹50 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 15:30 IST
Last Updated 2 ಫೆಬ್ರುವರಿ 2024, 15:30 IST
ಮಸ್ಕಿಯಲ್ಲಿ ಗುರುವಾರ ರಾತ್ರಿ ಹತ್ತಿಕೊಂಡ ಬೆಂಕಿಗೆ ಗಚ್ಚಿನಮಠದ ವಾಣಿಜ್ಯ ಮಳಿಗೆಯಲ್ಲಿನ ಪೆಂಟ್ ಅಂಗಡಿಗಳು ಭಸ್ಮವಾಗಿರುವುದು
ಮಸ್ಕಿಯಲ್ಲಿ ಗುರುವಾರ ರಾತ್ರಿ ಹತ್ತಿಕೊಂಡ ಬೆಂಕಿಗೆ ಗಚ್ಚಿನಮಠದ ವಾಣಿಜ್ಯ ಮಳಿಗೆಯಲ್ಲಿನ ಪೆಂಟ್ ಅಂಗಡಿಗಳು ಭಸ್ಮವಾಗಿರುವುದು   

ಮಸ್ಕಿ: ಬೆಂಕಿಯ ಕೆನ್ನಾಲಿಗೆಗೆ ಎರಡು ಮಳಿಗೆಗಳು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಗುರುವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.

ಗಚ್ಚಿನಮಠದ ವಾಣಿಜ್ಯ ಮಳಿಗೆಯಲ್ಲಿನ ಪೇಂಟ್ ಅಂಗಡಿಯ ಎರಡು ಮಳಿಗೆಗಳು ಭಸ್ಮವಾಗಿವೆ. ಪಕ್ಕದ ಮೊಬೈಲ್ ಅಂಗಡಿ ಭಾಗಶಃ ಸುಟ್ಟಿದೆ. ಪೇಂಟ್ ಅಂಗಡಿವೊಂದರಲ್ಲಿ ಅಂದಾಜು ₹50 ಲಕ್ಷ ಬೆಲೆ ಬಾಳುವ ಪೇಂಟ್ ಹಾಗೂ ಮಿಷನ್‌ಗಳು ಸುಟ್ಟು ಹೋಗಿವೆ. ಪೇಂಟ್ ಅಂಗಡಿ ಚನ್ನಬಸನಗೌಡ ಪಾಟೀಲ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ರಾತ್ರಿ 11 ಗಂಟೆಗೆ ಅಂಗಡಿಯಲ್ಲಿ ಬೆಂಕಿ ಕಾಣಸಿಕೊಂಡ ಕೂಡಲೇ ಸ್ಥಳೀಯರು ಲಿಂಗಸುಗೂರಿನ ಆಗ್ನಿ ಶಾಮಕ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. 25 ಕಿಮೀ ದೂರದಿಂದ ಆಗ್ನಿ ಶಾಮಕ ವಾಹನ ಬರುವುದು ತಡವಾದ ಕಾರಣ ಸೇರಿದ್ದ ನೂರಾರು ಜನರು ಬೆಂಕಿ ಆರಿಸಲು ಪ್ರಯತ್ನಿಸಿದರು. ಬೆಂಕಿ ಎರಡು ಮಳಿಗೆಯನ್ನು ಸುಟ್ಟು ಮೂರನೇ ಮಳಿಗೆಗೆ ತಾಗಿತು. 45 ನಿಮಿಷ ತಡವಾಗಿ ಆಗಮಿಸಿದ ಸಿಂಧನೂರು ಹಾಗೂ ಲಿಂಗಸುಗೂರಿನಿಂದ ಬಂದ ಆಗ್ನಿ ಶಾಮಕ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಪ್ರಯತ್ನ ಪಟ್ಟು ಬೆಂಕಿ ನಂದಿಸಿದ್ದಾರೆ.

ADVERTISEMENT

ಜನರನ್ನು ನಿಯಂತ್ರಸಲು ಪೊಲೀಸರು ಹರ ಸಾಹಸಪಟ್ಟರು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿ ಹಲವಾರು ಮುಖಂಡರು ಭೇಟಿ ನೀಡಿದರು.

ಮಸ್ಕಿಯಲ್ಲಿ ಗುರುವಾರ ರಾತ್ರಿ ಗಚ್ಚಿನಮಠದ ವಾಣಿಜ್ಯ ಮಳಿಗೆಯಲ್ಲಿನ ಪೆಂಟ್ ಅಂಗಡಿ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.