ADVERTISEMENT

ಶಾಸಕ ಹೂಲಗೇರಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:01 IST
Last Updated 5 ಸೆಪ್ಟೆಂಬರ್ 2020, 13:01 IST
 ಶಾಸಕ ಡಿ.ಎಸ್. ಹೂಲಗೇರಿ
 ಶಾಸಕ ಡಿ.ಎಸ್. ಹೂಲಗೇರಿ   

ಮುದಗಲ್ (ರಾಯಚೂರು): ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಕೋವಿಡ್‌ ದೃಢಪಟ್ಟಿದೆ ಎಂದು ಅವರ ಆಪ್ತ ಸಹಾಯಕ ಶರಣು ತಿಳಿಸಿದ್ದಾರೆ.

ಶಾಸಕರು ಕೆಲ ದಿನಗಳಿಂದ ಇಲಕಲ್ಲ ನಗರದ ಅವರ ನಿವಾಸದಲ್ಲಿಯೇ ಇದ್ದರು. ಇಲಕಲ್ಲನಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅಲ್ಲಿಯೇ ವರದಿ ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೋಗಿದ್ದಾರೆ. ಅವರ ಪತ್ನಿಗೂ ಕೂಡ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಅವರಿಗೆ ನೆಗೆಟಿವ್ ಬಂದಿದೆ.

ಕುಟುಂಬ ಸದಸ್ಯರು ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ಧಾರೆ. ಶಾಸಕರ ಸಂಪರ್ಕದಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರು ಸಹ ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.