ADVERTISEMENT

ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ₹ 50ಲಕ್ಷ ದೇಣಿಗೆ: ಸಚಿವ ಬೈರತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 13:51 IST
Last Updated 12 ಜನವರಿ 2025, 13:51 IST
ಜಾಲಹಳ್ಳಿಗೆ‌ ಸಮೀಪದ ತಿಂಥಣಿ ಬ್ರಿಜ್ ಹತ್ತಿರ ಭಾನುವಾರ ಕಲಬುರಗಿ ವಿಭಾದ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ (ಸಿದ್ಧ-ನಾಥ) ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವ ಕೆ.ಎಸ್ ಸುರೇಶ ಬೈರತಿ ಭಾಗವಹಿಸಿ ಮಾತನಾಡಿದರು
ಜಾಲಹಳ್ಳಿಗೆ‌ ಸಮೀಪದ ತಿಂಥಣಿ ಬ್ರಿಜ್ ಹತ್ತಿರ ಭಾನುವಾರ ಕಲಬುರಗಿ ವಿಭಾದ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ (ಸಿದ್ಧ-ನಾಥ) ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವ ಕೆ.ಎಸ್ ಸುರೇಶ ಬೈರತಿ ಭಾಗವಹಿಸಿ ಮಾತನಾಡಿದರು   

ಜಾಲಹಳ್ಳಿ: ಕನಕ ಗುರು ಪೀಠದಲ್ಲಿಯೇ ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವ ಕೆ.ಎಸ್ ಸುರೇಶ ಬೈರತಿ ಅವರು ವೈಯಕ್ತಿಕವಾಗಿ ₹50ಲಕ್ಷ ದೇಣಿಗೆ‌ ನೀಡಲು ಘೋಷಣೆ ಮಾಡಿದರು.

ಭಾನುವಾರ ಸಮೀಪದ ತಿಂಥಣಿ‌ ಬ್ರಿಜ್ ಹತ್ತಿರದ ಕಲಬುರಗಿ ವಿಭಾಗದ ಕನಕಗುರು ಪೀಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಮೂರು ದಿನಗಳ ವರೆಗೆ ಹಮ್ಮಿಕೊಂಡ ಹಾಲುಮತ (ಸಿದ್ಧ-ನಾಥ) ಸಂಸ್ಕೃತಿ ವೈಭವದ ಮೊದಲ ದಿನದ ಕಾರ್ಯಕ್ರಮ ದಲ್ಲಿ ವಿದ್ಯಾಮಂದಿರದ ಶಿಲಾನ್ಯಾಸ ಮಾಡಿ ಮಾತನಾಡಿದರು.

12ನೇ ಶತಮಾನದಲ್ಲಿ ಕಂಡ ಶರಣರ ಕನಸು ನನಸು ಮಾಡಲು ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿಯೇ ತಮ್ಮ ಜೀವನದ ಧೈಯವಾಗಿಸಿಕೊಂಡು ಅಧಿಕಾರ ಮಾಡುವಂತಹ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಮ್ಮ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿರುವ 60 ಲಕ್ಷ ಕುರುಬರು ಮಾತ್ರ ಅವರ ಬೆಂಬಲಕ್ಕೆ ಇದ್ದರೆ ಸಾಲದು. ರಾಜ್ಯ ಬಡವರು, ಹಿಂದೂಳಿದ ವರ್ಗದವರು ಕೂಡ ಸೇರಬೇಕು. ಅವರು ಜಾರಿಗೆ ತಂದಿರುವ
ಯೋಜನೆಗಳು ಎಲ್ಲಾ ವರ್ಗದ ಜನತೆಗೆ ಅನುಕೂಲವಾಗಿದೆ. ಅಲ್ಲದೇ ಯಾವುದೇ ಸೌಲಭ್ಯ ನೀಡುವಾಗ ನ್ಯಾಯ ಬದ್ಧವಾಗಿದ್ದಾರೆ ಮಾತ್ರ ಅವರು ಮಾಡುವುದು ಇಲ್ಲವಾದರೆ ಅ ಸಾಧ್ಯವಾದ ಮಾತು ಎಂದು ಹೇಳಿದರು.

ಬೆಂಗಳೂರು ನಗರದ ಗಾಂಧಿನಗರದಲ್ಲಿ ಸುಮಾರು ನೂರು ವರ್ಷಗಳ ಹಳೆಯ ನಿವೇಶನ ಕಟ್ಟಡ ಕುರುಬ ಸಮಾಜಕ್ಕೆ ಸೇರಿದ್ದು ಇತ್ತು. ಅದನ್ನು ಉಳಿಸಿಕೊಂಡು ಹಳೆಯ ಕಟ್ಟಡ ತೆರವುಗೊಳಿಸಿ ಕೇಂದ್ರ ಕುರುಬ ಸಂಘದ‌ ಹೊಸ ಕಟ್ಟಡ ನಿರ್ಮಾಣಕ್ಕೆ ₹40ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಸಮಾಜದ ಜನತೆ ಉಳಿದ ಸಮಾಜದ ಜನರೊಂದಿಗೆ ಪ್ರೀತಿ ವಿಶ್ವಾಸ ದಿಂದ ಬಾಳಬೇಕು. ಶಿಕ್ಷಣ, ಸಂಘಟನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.

ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮಿ ಮಾತನಾಡಿ, ರಾಜ್ಯದ‌ ತುಂಬಾ ಕುರುಬ ಸಮಾಜಕ್ಕೆ ಸೇರಿದ ದೇವಸ್ಥಾನಗಳ ಪೂಜಾರಿಗಳಿಗೆ ಅನೇಕ ತೊಂದರೆಗಳು ಇದ್ದು. ಅಗತ್ಯ ಸೌಲಭ್ಯ ಒದಗಿಸಲು ಹಾಗೂ ಪರಿಹಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮಾತುಕತೆಗೆ ಅವಕಾಶ ಕೊರಿದರೂ ಅವಕಾಶ ನೀಡದೇ ಇದ್ದರೆ, ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಮಾಜದ ಜನತೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವುದೇ ಅಸಡ್ಡೆ, ನಿರ್ಲಕ್ಷ್ಯ ಭಾವನೆ ಇಲ್ಲವಾಗಿದ್ದು, ಈಗಾಗಲೇ ಕುರುಬ ಸಮಾಜಕ್ಕೆ ಸೇರಿದ ಹಾಗೂ ದತ್ತಿಧಾರ್ಮಿಕ ಇಲಾಖೆಗೆ ಒಳಪಡುವ ದೇವಸ್ಥಾನದ ಪೂಜಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೇ ರಾಜ್ಯದ ಎಲ್ಲಾ ಸಮಾಜದ ದೇವಸ್ಥಾನದ ನಿವೇಶಗಳನ್ನು ಅ ದೇವಸ್ಥಾನದ ಹೆಸರಲ್ಲಿಯೇ ಖಾತೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆ, ವಿನಾಕಾರಣ ವಿವಾದಗಳು ಸೇರಿದಂತೆ ತುಂಬಾ ಒತ್ತಡದಲ್ಲಿ‌ ಇದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಯೇ ಕುರುಬ ಸಮಾಜದ ಎಲ್ಲಾ ಪೂಜಾರಿಗಳ ಸಭೆ ನಡೆಸಲು ಶೀಘ್ರದಲ್ಲಿಯೇ ಸಮಯ ನಿಗದಿ ಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕೊಪ್ಪಳ ಸಂಸದ ರಾಜಶೇಖ ಹಿಟ್ನಾಳ ಭಾಗವಹಿಸಿ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ಬಡತನ ಮುಕ್ತವಾಗಿದೆ. ರಾಜ್ಯದಲ್ಲಿ 5 ಗ್ಯಾರಂಟಿ ಗಳ ಮೂಲಕ ಸಾಮಾನ್ಯ ಜನರ ಬದುಕು ಸ್ವಲ್ಪ ಮಟ್ಟಿಗೆ ಸುಧಾರಣೆ ಅಗಿದೆ. ಸಮಾಜದ ಜನತೆ ಸುಧಾರಣೆ ಅಗಬೇಕು. ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದು ಹೇಳಿದರು.

ಮಾಜಿ‌ ಶಾಸಕ ರಾಜುಗೌಡ ಮಾತನಾಡಿ, ತಾವು ಅಧಿಕಾರದಲ್ಲಿ ಇದ್ದಾಗ ಈ ಪೀಠದ ಅಭಿವೃದ್ದಿ ಅನೇಕ ಯೋಜನೆಗಳ ಮೂಲಕ ಅನುದಾನ ಕಲ್ಪಿಸಲಾಗಿದೆ. ಈ ಪೀಠದ ಅಡಿಯಲ್ಲಿರುವ ಪೂಜಾರಿಗಳ ಪ್ರಯತ್ನದಿಂದಲೇ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಿರುವುದು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸುವ ಕೆಲಸಕ್ಕೆ ಕೈ ಹಾಕಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ, ನಂತರ ಕಾಂಗ್ರೆಸ್ ನವರು ವಿರೋಧ ಪಕ್ಷದಲ್ಲಿ‌ ಕುಳಿತು ಕೊಳ್ಳಬೇಕಾಗುತ್ತೆ ಎಂದು ಹೇಳಿದರು.

ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ಹೊಸದುರ್ಗ ಕನಕಗುರು ಪೀಠದ ಈಶ್ವರನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಶಾಸಕರಾದ ವೇಣುಗೋಪಾಲ ನಾಯಕ, ಚನ್ನಾರೆಡ್ಡಿ ಪಾಟೀಲ್, ಮಾನಪ್ಪ ವಜ್ಜಲ್, ಬಸನಗೌಡ ತುರುವಿಹಾಳ, ಬಸನಗೌಡ ದದ್ದಲ್, ಮಾಜಿ ಶಾಸಕ ರಾಜುಗೌಡ, ಕೆ.ಎಂ ರಾಮಚಂದ್ರಪ್ಪ, ಗ್ರಾ.ಪಂ‌ ಅಧ್ಯಕ್ಷೆ ಮಲ್ಲಮ್ಮ ಗಣಜಲಿ, ಮುಖಂಡರಾದ ಸಿದ್ದಯ್ಯ ತಾತಾ ಗುರುವಿನ,ಅದನಗೌಡ ಪಾಟೀಲ್, ನಾಗವೇಣಿ, ಅರತಿ ಪುಷ್ಪವತಿ ಚಂದ್ರಶೇಖರ್, ಚಂದಪ್ಪ ಬುದ್ದಿನ್ನಿ, ವೇಣುಗೋಪಾಲ್ ನಾಯಕ, ವಿ.ಎಸ್ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಕೀಲ ಮಹಾಂತೇಶ ಕೌಲಗಿ ಕಲಬುರಗಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.