
ಪ್ರಜಾವಾಣಿ ವಾರ್ತೆ
ಮುದಗಲ್: ಇಲ್ಲಿನ ಸೋಮವಾರಪೇಟೆ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ.
ಚರಂಡಿ ನೀರು ಕೆರೆ ಒಡಲು ಸೇರುತ್ತಿದೆ. ಇದರಲ್ಲಿ ರಾಸಾಯನಿಕ ಸೇರಿಕೊಂಡಿದ್ದರಿಂದ ಮೀನುಗಳು ಸಾವನ್ನಪ್ಪಿವೆ. ಕೆರೆ ಪಕ್ಕ ತಿರುಗುವಾಗ ಗಬ್ಬು ವಾಸನೆ ಬರುತ್ತಿದೆ. ಪಕ್ಕದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ ಇದ್ದು, ರೋಗಿಗಳಿಗೆ ತೊಂದರೆ ಉಂಟಾಗಿದೆ. ಮೀನು ಸಾಕಾಣಿಕೆಗೆ ಕೆರೆ ಗುತ್ತಿಗೆ ಪಡೆದ ಮೀನುಗಾರರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ ಕಲುಷಿತ ನೀರನ್ನು ಶುದ್ಧೀಕರಿಸಲು ಮುಂದಾಗಬೇಕು ಎಂದು ಪಟ್ಟಣದ ನಿವಾಸಿ ಪೌಲರಾಜ ಎಮ್ಮಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.