ರಾಯಚೂರು: ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾನದಿಯಲ್ಲಿ ಪ್ರವಾಹಮಟ್ಟ ಶುಕ್ರವಾರ 5.41 ಲಕ್ಷ ಕ್ಯುಸೆಕ್ ಗೆ ತಲುಪಿದೆ.
ನಾರಾಯಣಪುರ ಜಲಾಶಯದಿಂದ 1.82 ಲಕ್ಷ ಕ್ಯುಸೆಕ್ ಹೊರಬಿಡಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಗಡಿಭಾಗದಲ್ಲಿ ಕೃಷ್ಣಾನದಿಯೊಂದಿಗೆ ಸಂಗಮವಾಗುವ ಭೀಮಾನದಿಯಲ್ಲಿ 3.6 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಇದರಿಂದ ರಾಯಚೂರು ತಾಲ್ಲೂಕು ಕೃಷ್ಣಾನದಿ ತೀರಗಳಲ್ಲಿ ಪ್ರವಾಹಮಟ್ಟ ಭಾರಿ ಏರಿಕೆ ಆಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಗುರ್ಜಾಪುರ, ಡಿ.ರಾಂಪೂರ ಹಾಗೂ ಬೂರ್ದಿಪಾಡ ಗ್ರಾಮಗಳ ಜನರನ್ನು ಗುರುವಾರ ತಡರಾತ್ರಿ ಸರ್ಕಾರಿ ಬಸ್ ಗಳ ಮೂಲಕ ಸ್ಥಳಾಂತರ ಮಾಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.