ADVERTISEMENT

ಕವಿತಾಳ : ವಿಘ್ನ ನಿವಾರಕನಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 16:05 IST
Last Updated 8 ಸೆಪ್ಟೆಂಬರ್ 2024, 16:05 IST
ಕವಿತಾಳದಲ್ಲಿ ಸ್ಟೇಟ್‌ ಬ್ಯಾಂಕ್‌ ಹಿಂಬದಿ ಪ್ರತಿಷ್ಠಾಪಿಸಿದ ಎಲ್‌ಬಿಕೆ ಹಿಂದೂ ಮಹಾಗಣಪತಿ
ಕವಿತಾಳದಲ್ಲಿ ಸ್ಟೇಟ್‌ ಬ್ಯಾಂಕ್‌ ಹಿಂಬದಿ ಪ್ರತಿಷ್ಠಾಪಿಸಿದ ಎಲ್‌ಬಿಕೆ ಹಿಂದೂ ಮಹಾಗಣಪತಿ   

ಕವಿತಾಳ: ಪಟ್ಟಣದಲ್ಲಿ ವಿಘ್ನ ನಿವಾರಕನಿಗೆ ಶನಿವಾರ ಭವ್ಯ ಸ್ವಾಗತ ಕೋರಿದ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಆರ್ಯವೈಶ್ಯ ಸಮಾಜದ ವತಿಯಿಂದ ಇಲ್ಲಿನ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಭಜನೆ ಹಾಡುಗಳೊಂದಿಗೆ ಗಣೇಶ ಮೂರ್ತಿಯನ್ನು ತಂದು ವಾಸವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಇಲ್ಲಿನ ಜಲಸಂಪನ್ಮೂಲ ಕಚೇರಿ ಆವರಣದಲ್ಲಿನ ಗಣೇಶ ದೇವಸ್ಥಾನ, ಎಸ್‌ಬಿಐ ಹಿಂದೆ ಉದಯನಗರದಲ್ಲಿ ಎಲ್‌ಬಿಕೆ ಹಿಂದೂ ಮಹಾಗಣಪತಿ, ದೈವದಕಟ್ಟೆ ಗಣಪತಿ, ತ್ರಯಂಭಕೇಶ್ವರ ದೇವಸ್ಥಾನದ ಹತ್ತಿರ, ಕಲ್ಮಠ ಕಲ್ಯಾಣ ಮಂಟಪ, ಸಂತೆ ಕಟ್ಟೆ ಹತ್ತಿರದ ಆಂಜನೇಯ ದೇವಸ್ಥಾನ ಮತ್ತು ಈರಣ್ಣ ಕಟ್ಟೆ ಹತ್ತಿರ ಸೇರಿದಂತೆ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮೂರು ಮತ್ತು ಐದು ದಿನಗಳ ವರೆಗೆ ವಿಘ್ನ ನಿವಾರಕನಿಗೆ ಪೂಜೆ ನಡೆಯುತ್ತದೆ.

ಗೌರಿ ಗಣೇಶ ಹಬ್ಬದ ಅಂಗವಾಗಿ ಅನೇಕರು ಮನೆಗಳಲ್ಲಿಯೇ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಯಿಂದ ಪೂಜೆ ಸಲ್ಲಿಸಿದರು, ಮೋದಕ ನೈವೇದ್ಯ ಮಾಡಿ ಸಂಜೆಗೆ ಇಲ್ಲಿನ ಗೂಗೆಬಾಳ ಸೇತುವೆಗೆ ತೆರಳಿ ಮೂರ್ತಿ ವಿಸರ್ಜನೆ ಮಾಡಿದರು.

ADVERTISEMENT
ಕವಿತಾಳದಲ್ಲಿ ಶನಿವಾರ ಆರ್ಯವೈಶ್ಯ ಸಮಾಜದ ವತಿಯಿಂದ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.