ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಬೈಪಾಸ್‌ ರಸ್ತೆಗೆ ಡಾಂಬರ್‌ ಹಾಕಿದ ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:45 IST
Last Updated 4 ಆಗಸ್ಟ್ 2025, 7:45 IST
ಹಟ್ಟಿ ಚಿನ್ನದ. ಗಣಿ :ಸ್ಧಳೀಯ ಹಟ್ಟಿ ಪಟ್ಟಣದ ಬೈ‌ಪಾಸ್ ರಸ್ತಗೆ ಡಾಂಬರ್ ಹಾಕಿ ರಸ್ತೆ ನಿರ್ಮಿಸಲಾಗಿದೆ.
ಹಟ್ಟಿ ಚಿನ್ನದ. ಗಣಿ :ಸ್ಧಳೀಯ ಹಟ್ಟಿ ಪಟ್ಟಣದ ಬೈ‌ಪಾಸ್ ರಸ್ತಗೆ ಡಾಂಬರ್ ಹಾಕಿ ರಸ್ತೆ ನಿರ್ಮಿಸಲಾಗಿದೆ.   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಬೈಪಾಸ್‌ ರಸ್ತೆಯಲ್ಲಿನ ಗುಂಡಿಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಚ್ಚಿಸಿದ್ದು, ರಸ್ತೆಗೆ ಡಾಂಬರ್ ಹಾಕಿಸಿದ್ದಾರೆ.

ಬೈಪಾಸ್ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಸಮಸ್ಯೆ ಕುರಿತು ‘ಪ್ರಜಾವಾಣಿ’ಯ ಏಪ್ರಿಲ್‌ 20ರ ಸಂಚಿಕೆಯಲ್ಲಿ ‘ಮಳೆ ಬಂದು ರಸ್ತೆ ಹಾಳು: ಸಂಚಾರಕ್ಕೆ ತೊಂದರೆ’ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಆಡಳಿತ, ₹7 ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಿಸಿದೆ.

ADVERTISEMENT

‘ಹಟ್ಟಿ ಪಟ್ಟಣದ ಬೈಪಾಸ್ ರಸ್ತೆ ಸಮಸ್ಯೆ ಕುರಿತು ಜನರಿಂದ ದೂರುಗಳು ಬಂದಿದ್ದವು. ಸುಗಮ ಸಂಚಾರಕ್ಕೆ ಅನುಕೂಲವಾಗಲು ರಸ್ತೆಗೆ ಡಾಂಬರ್ ಹಾಕಿ ಸಮಸ್ಯೆ ಬಗೆಹರಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ತಿಳಿಸಿದರು.

‘ಸಮಸ್ಯೆ ಕುರಿತು ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದರು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಎಚ್ಚೆತ್ತುಕೊಂಡು ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿದ್ದಾರೆ’ ಎಂದು ಕರವೇ ಅಧ್ಯಕ್ಷ ಮೌನೇಶ ಕಾಕಾನಗರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.