ADVERTISEMENT

ಹಟ್ಟಿ ಚಿನ್ನದ ಗಣಿ | ಧರ್ಮ ಪಾಲನೆಗೆ ಎಲ್ಲರೂ ಶ್ರಮಿಸಲಿ: ಮಹಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:09 IST
Last Updated 17 ಫೆಬ್ರುವರಿ 2026, 5:09 IST
ಹಟ್ಟಿ ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ನಡೆದ ಧರ್ಮ ಸಭೆಯಲ್ಲಿ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಟ್ಟಿ ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ನಡೆದ ಧರ್ಮ ಸಭೆಯಲ್ಲಿ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   

ಹಟ್ಟಿ ಚಿನ್ನದ ಗಣಿ: ‘ಧರ್ಮವೆಂದರೆ ಎಂದರೆ ಪೂಜಾ ಪದ್ಧತಿಯಲ್ಲ. ಅದೊಂದು ಜೀವನ ಪದ್ಧತಿಯಾಗಿದ್ದು, ಸಂಸ್ಕಾರಯುತ, ಮಾನವೀಯ ಮೌಲ್ಯಗಳೊಂದಿಗೆ ಬದುಕುವುದಾಗಿದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ’ ಎಂದು ತಿಮ್ಮಪೂರ ಕಲ್ಯಾಣ ಆಶ್ರಮದ ಮಹಾಂತಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ಮಾನಪ್ಪ ವಜ್ಜಲ ಕುಟುಂಬದವರು ಹಮ್ಮಿಕೊಂಡಿದ್ದ ವೀರನಾಗಮ್ಮ ದೇವಸ್ಧಾನ ದೇವಾಲಯ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಭಾನುವಾರ ಸಂಜೆ ಮಾತನಾಡಿ, ‘ನಮ್ಮ ಸಂಸ್ಕೃತಿ, ಅಚಾರ–ವಿಚಾರ ಅಳಿಸಲು ನಾವು ಎಂದಿಗೂ ಬಿಡಬಾರದು. ನಮ್ಮ ಧರ್ಮವನ್ನು ನಾವೇ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ‘ವೀರನಾಮ್ಮ ದೇವಸ್ಧಾನಕ್ಕೆ 500 ವರ್ಷಗಳ ಇತಿಹಾಸವಿದೆ. ಗೆಜ್ಜಲಗಟ್ಟಾ ಗ್ರಾಮದಲ್ಲಿ ನೆಲಿಸಿದ್ದು, ಈ ಭಾಗದ ಜನರ ಪುಣ್ಯ. ಬೇಡಿ ಬಂದ ಭಕ್ತರಿಗೆ ವರವ ನೀಡುವ ಗ್ರಾಮ ದೇವತೆಯ ದೇವಸ್ಧಾನ ಉದ್ಘಾಟನೆಗೆ ಸಿದ್ಧದ್ದವಾಗಿದೆ. ನಮ್ಮ‌ ಕುಟುಂಬವು, ವೀರನಾಗಮ್ಮ ದೇವಿಯ ಆಶೀರ್ವಾದದಿಂದ ಆರೋಗ್ಯ ಹಾಗೂ ಕ್ಷೇಮದಿಂದಿದೆ. ಗ್ರಾಮ ದೇವತೆಯ ಆಶೀರ್ವಾದಿಂದ ಮಳೆ–ಬೆಳೆ ಸಮೃದ್ಧವಾಗಿರಲಿದೆ’ ಎಂದು ಹೇಳಿದರು.

ADVERTISEMENT

ಆಳಂದ ಮಹಾಂತಲಿಂಗ ಶಿವಾಚಾರ್ಯರು, ರಾಯಚೂರು ಶಾಸಕ ಶಿವರಾಜ ಪಾಟೀಲ, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬಸವಂತರಾಯ ಕುರಿ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾ ತಂಡಗಳಿಂದ ನೃತ್ಯ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

ಅಕಲಿಮಠದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ, ದೊಡ್ಡಬಸವ ತಾತಾನವರು, ಶರಣಯ್ಯ ತಾತಾನವರು, ರಾಜಾ ಶ್ರೀನಿವಾಸನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಈಶ್ವರ ವಜ್ಜಲ, ಪರಮೇಶ ಯಾದವ, ಗುಂಡಪ್ಪಗೌಡ ಮಾಸ್ಟರ್, ಶಂಕರಗೌಡ, ಹಟ್ಟಿ ಠಣೆಯ ಪಿಐ ಶಿವಾನಂದ, ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.