ADVERTISEMENT

ಐಪಿಎಲ್‌ ಬೆಟ್ಟಿಂಗ್‌: ಇಬ್ಬರು ಬುಕ್ಕಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 9:00 IST
Last Updated 1 ಅಕ್ಟೋಬರ್ 2020, 9:00 IST
   

ರಾಯಚೂರು: ಐಪಿಎಲ್‌ ಪಂದ್ಯಗಳಿಗೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗ್ರಾಮಗಳಲ್ಲಿ ಬೆಟ್ಟಿಂಗ್‌ ಪಡೆಯುತ್ತಿದ್ದ ಇಬ್ಬರು ಬುಕ್ಕಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ದೇವದುರ್ಗದ ರಾಷ್ಟ್ರಪತಿ ಬಡಾವಣೆಯಲ್ಲಿ ಪಾನ್‌ಶಾಪ್‌ ನಡೆಸುತ್ತಿರುವ ಶ್ರೀನಿವಾಸ ಚಂದಣ್ಣ ಹಾಗೂ ದೇವದುರ್ಗ ತಾಲ್ಲೂಕು ಹೇಮನೂರ ಗ್ರಾಮದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ರಮೇಶ ಸುಭಾಷ್‌ ಬಂಧಿತ ಆರೋಪಿಗಳು.

ಆರೋಪಿಗಳಿಂದ ₹5,300 ನಗದು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ದೇವದುರ್ಗ ಠಾಣೆಯ ಪಿಎಸ್‌ಐ ಅಗ್ನಿ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.