ADVERTISEMENT

ರಸಪ್ರಶ್ನೆ ಸ್ಪರ್ಧೆ: ಬಸಶ್ರೀ ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 16:03 IST
Last Updated 18 ಫೆಬ್ರುವರಿ 2020, 16:03 IST
ರಾಯಚೂರಿನಲ್ಲಿ ಇಸ್ರೋ ಸಂಸ್ಥೆಯಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಸವಶ್ರೀ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕಿ ಲಲಿತಾ ಮತ್ತು ಶಿಕ್ಷಕಿ ವಿಜಯಲಕ್ಷ್ಮೀ ಹಾಗೂ ಯೋಗ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ ಅವರು ಮಂಗಳವಾರ ಅಭಿನಂದಿಸಿದರು

ರಾಯಚೂರು: ನಗರದ ನವೋದಯ ಎಂಜಿನಿಯರಿಂಗ್‌ ಮಹಾವಿದ್ಯಾಲಯದಲ್ಲಿ ‘ಇಸ್ರೋ’ ಸಂಸ್ಥೆಯಿಂದ ವಿಕ್ರಮ್ ಸಾರಾಭಾಯಿ ಜನ್ಮಶತಮಾನೋತ್ಯವ ಕಾರ್ಯಕ್ರಮದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಸುಗುಣ ಶಿಕ್ಷಣ ಸಂಸ್ಥೆಯ ಬಸವಶ್ರೀ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

9ನೇ ತರಗತಿ ವಿದ್ಯಾರ್ಥಿಗಳಾದ ವಾಗೀಶ ಹಿರೇಮಠ ಮತ್ತು ಮಲ್ಲಿಕಾರ್ಜನ ಗೌಡ ತಂಡವು ವಿಜೇತವಾಗಿದೆ. ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಬಸವನಗೌಡ, ಕಾರ್ಯದರ್ಶಿ, ಮಲ್ಲಿಕಾರ್ಜುನ ಪಾಟೀಲ ಹಾಗೂ ಸಂಸ್ಥಾಪಕಿ ಲಲಿತಾ, ಶಿಕ್ಷಕರಾದ ವಿಜಯಲಕ್ಷ್ಮೀ, ಹುಸೇನಪ್ಪ, ಮಲ್ಲಿಕಾರ್ಜುನ ಸ್ವಾಮಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT