
ರಾಯಚೂರು: ‘ಮನರಂಜನೆ ಜೊತೆಗೆ ನಾಟಕಗಳನ್ನು ಪ್ರೋತ್ಸಾಹಿಸಬೇಕು’ ಎಂದು ಮಾನ್ವಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹೀದ್ ಹೇಳಿದರು.
ನಗರದ ರಂಗಮಂದಿರದಲ್ಲಿ ಗುರುವಾರ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕ್ರಿಮಿನಾಶಕ, ರಸಗೊಬ್ಬರ ಕಂಪನಿಗಳು ರೈತರನ್ನು ಹೇಗೆ ದಿಕ್ಕು ತಪ್ಪಿಸುತ್ತವೆ, ಅಧಿಕ ಇಳುವರಿ ಹಾಗೂ ಹಣದ ಆಸೆಗೆ ಬೀಳುವ ರೈತರು ಕಂಪನಿಗಳಿಂದ ಹೇಗೆ ವಂಚಿತರಾಗುತ್ತಾರೆ. ರಸಗೊಬ್ಬರ ಅಧಿಕ ಬಳಕೆಯಿಂದ ಭೂಮಿ ಬರಡಾಗುತ್ತಿರುವುದು, ಸಾಲದ ಸುಳಿಯಿಂದ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ’ ಕುರಿತು ಪ್ರವೀಣ ಕುಮಾರ ರೆಡ್ಡಿ ಗುಂಜಳ್ಳಿ ನಿರ್ದೇಶನದಲ್ಲಿ ಸಾಹಿತಿ, ಕತೆಗಾರ ಮಹಾಂತೇಶ ನವಲಕಲ್ ಅವರ ‘ಭಾರತ ಭಾಗ್ಯವಿಧಾತ ಕಥೆಯ ಹಿಲಿಯೋಥಿಸ್ ನಾಟಕ’ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತು.
ಅಲ್ತಾಫ್ ರಂಗಮಿತ್ರ ತಂಡದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕಥನ, ವಿ.ಎಸ್. ಅಕ್ಕಿ, ಲಕ್ಷ್ಮಣ ಮಂಡಲಗೇರಾ, ಹನುಮಂತಪ್ಪ ಚಾಲಿಬೆಂಚಿ, ಉರುಕುಂದಪ್ಪ, ಈರಣ ಸೇನಾಪಲ್ಲಿ, ಅಣವೀರಯ್ಯ, ರಂಗಸ್ವಾಮಿ, ವೆಂಕಟನರಸಿಂಹಲು, ರಂಗಚೇತನ ಸಾಂಸ್ಕೃತಿಕ ಕಲಾ ಸಂಘ ರಾಯಚೂರು, ದೇವಣ್ಣ ಎಲೆ ಬಿಚ್ಚಾಲಿ ಅವರ ನಾಟಕ ಸೇರಿದಂತೆ 14 ಪ್ರದರ್ಶನಗಳು ಗಮನ ಸೆಳೆದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಿರವಾರ ಶಿರಸ್ತೇದಾರ ಜುಬೇರ್ ಬಿನ್‌ಸಾಲಂ, ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಐಸಾನ್ ಉಲ್‌ಹಕ್, ಜಿಲ್ಲಾಧಿಕಾರಿ ಕಚೇರಿಯ ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಬಸವರಾಜ, ಮಾನ್ವಿ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಫಕ್ರುದ್ದೀನ್, ಕಂದಾಯ ಅಧಿಕಾರಿ ಶ್ರೀನಾಥ, ಗ್ರಾಮ ಆಡಳಿತಾಧಿಕಾರಿ ವಿಲ್ಸನ್ ಮತ್ತು ವಾರ್ತಾ ಇಲಾಖೆಯ ರಮೇಶ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಮನಕಲುಕಿದ ಭಾರತ ಭಾಗ್ಯವಿದಾತ ಆಸಕ್ತಿಯಿಂದ ನಾಟಕ ವೀಕ್ಷಿಸಿದ ಮಕ್ಕಳು
ರೈತರಿಗೆ ಅನ್ಯಾಯಗಳ ಬಗ್ಗೆ ಮಾಹಿತಿ ಇರಲಿಲ್ಲ ಈ ನಾಟಕ ನೋಡಿದ ನಂತರವಷ್ಟೆ ಇಷ್ಟೊಂದು ಅನ್ಯಾಯ ಸಹಿಸಿಕೊಳ್ಳುವ ಶಕ್ತಿ ರೈತರಲ್ಲಿದೆ ಎಂದು ಅರ್ಥವಾಯಿತುನಿರ್ಮಲಾ ಪಿಯುಸಿ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.