ADVERTISEMENT

ಎರಡು ಬೈಕ್‌ಗಳಿಗೆ ಕೆಕೆಆರ್‌ಟಿಸಿ ಬಸ್‌ ಡಿಕ್ಕಿ: ರಾಯಚೂರು ಜಿಲ್ಲೆಯ ಐವರ ಸಾವು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 12:54 IST
Last Updated 11 ಮಾರ್ಚ್ 2025, 12:54 IST
   

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಪಾಂಡವಗಲ್ ಗ್ರಾಮದ ಬಳಿ ಮಂಗಳವಾರ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಾಯಚೂರು ಜಿಲ್ಲೆಯ ಐವರು ಮೃತಪಟ್ಟಿದ್ದಾರೆ.

ಗಂಗಾವತಿಯಿಂದ ಮಂತ್ರಾಲಯಕ್ಕೆ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಹಿಂದಿನಿಂದ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಒಬ್ಬರು ಆದೋನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎರಡೂ ಬೈಕ್‌ಗಳು ನಜ್ಜುಗುಜ್ಜಾಗಿವೆ.

ಮಾನ್ವಿ ಪೊಲೀಸ್ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿ ಹೇಮಾದ್ರಿ (55) ಪತ್ನಿ ನಾಗರತ್ನಮ್ಮ(48) ಪುತ್ರ ದೇವರಾಜು (25) ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಆದೋನಿ ಮಂಡಲದ ಕುಪ್ಪಗಲು ಗ್ರಾಮದ ಈರಣ್ಣ, ಪತ್ನಿ ಆದಿಲಕ್ಷ್ಮಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಆದೋನಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದೋನಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.