
ಮಾನ್ವಿ: ‘ಭಕ್ತರ ಆಶಯದಂತೆ ಕರೇಗುಡ್ಡ ಮಠ ಹಾಗೂ ಕೊಟ್ನೆಕಲ್ ಶಾಖಾ ಮಠದ ಅಭಿವೃದ್ದಿಗಾಗಿ ₹50 ಲಕ್ಷ ಅನುದಾನ ನೀಡಲಾಗಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಾಲ್ಲೂಕಿನ ಸುಕ್ಷೇತ್ರ ಕರೇಗುಡ್ಡ ಗ್ರಾಮದ ಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮರ ಜೀವನ ದರ್ಶನ ಪ್ರವಚನದ ಮಹಾಮಂಗಲೋತ್ಸವ, 5,001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕರೇಗುಡ್ಡದ ಶ್ರೀಮಠದಲ್ಲಿ ನಿರಂತರವಾಗಿ ಅನ್ನದಾಸೋಹ, ಪುರಾಣ ಮತ್ತು ಪ್ರವಚನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಹಂಪಯ್ಯ ನಾಯಕ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಹಾಗೂ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಮಾತನಾಡಿದರು.
ಒಳಬಳ್ಳಾರಿಯ ಸುವರ್ಣಗಿರಿ ವೀರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯರು, ರೌಡಕುಂದ ಸಂಸ್ಥಾನದ ಶಿವಸಿದ್ದಲಿಂಗ ಶಿವಾಚಾರ್ಯರು, ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ, ಕರೇಗುಡ್ಡ ಮಠದ ಉತ್ತರಾಧಿಕಾರಿ ಸಂಗನಬಸವ ಸ್ವಾಮೀಜಿ, ಕಾರಲಕುಂಟಿ ಅಮರೇಗೌಡ, ದೊಡ್ಡಬಸಪ್ಪಗೌಡ ಭೋಗಾವತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.