ಲಿಂಗಸುಗೂರು: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಗ್ರಾಮ ಪಂಚಾಯಿತಿಯ 22 ಮಂದಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಪತ್ರವನ್ನು ಉಪವಿಭಾಗಾಧಿಕಾರಿಗೆ ಸೋಮವಾರ ಸಲ್ಲಿಸಿದರು.
ಪಾಮನಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತೆಮ್ಮ ಹುಲಗಪ್ಪ ಅವರು ಸಾರ್ವಜನಿಕರ ಹಾಗೂ ಸದಸ್ಯರ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಅಧ್ಯಕ್ಷರ ಹುದ್ದೆ ನಿರ್ವಹಿಸಲು ವಿಫಲರಾಗಿದ್ದಾರೆ. ಪಾರ್ವತೆಮ್ಮ ಅಧ್ಯಕ್ಷರಾಗಿ ಮುಂದುವರಿಯಲು ನಮ್ಮ ಬೆಂಬಲ ಇಲ್ಲ ಎಂದು 22 ಮಂದಿ ಸದಸ್ಯರು ಖುದ್ದಾಗಿ ಅವಿಶ್ವಾಸ ಗೊತ್ತುವಳಿ ಪತ್ರ ಸಲ್ಲಿಸಿದರು.
ಸದಸ್ಯರಾದ ಶಿವಲೀಲಾ, ಶ್ರೀನಿವಾಸ, ದುರುಗಪ್ಪ, ವೆಂಕಟೇಶ ಕಾಸರೆಡ್ಡಿ, ರೇಣುಕಾ, ಖಾಜಾಬಿ, ಸೈಕಲ್ ರಾಜಾಸಾಬ್, ಶ್ವೇತಾ, ಬಸಮ್ಮ, ಶರಣಪ್ಪ, ತಿಮ್ಮಮ್ಮ, ರಿಯಾನ ಬೇಗಂ, ಈರಮ್ಮ, ಶಿವನಮ್ಮ, ಶರಣಪ್ಪ, ಶಕುಂತಲಾ, ಅಮರೇಶ, ಶಿವಪ್ಪ, ಶಿಲ್ಪಾ, ಲಚಮಪ್ಪ ನಾಯಕ, ಈರಮ್ಮ, ಬಸಲಿಂಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.