ADVERTISEMENT

ಮಂತ್ರಾಲಯದಲ್ಲಿ ರಾಯರ ಮಧ್ಯಾರಾದನೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 7:46 IST
Last Updated 17 ಆಗಸ್ಟ್ 2019, 7:46 IST
ತಿರುಮಲದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಮಧ್ಯಾರಾದನೆ ದಿನ ಶನಿವಾರ ಸಮರ್ಪಿಸಲಾಯಿತು.
ತಿರುಮಲದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಮಧ್ಯಾರಾದನೆ ದಿನ ಶನಿವಾರ ಸಮರ್ಪಿಸಲಾಯಿತು.   

ಮಂತ್ರಾಲಯ: ಕಾಮಧೇನು ಕಲ್ಪವೃಕ್ಷ ಶ್ರೀ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವವು ಸಂಭ್ರಮ, ಸಡಗರದೊಂದಿಗೆ ನಡೆಯುತ್ತಿದ್ದು, ಶನಿವಾರ ಮಧ್ಯಾರಾಧನೆಯಂದು ವಿಶೇಷ ಪೂಜಾ ವಿಧಿ ವಿಧಾನಗಳು ಜರಗುತ್ತಿವೆ.

ತಿರುಪತಿ ತಿರುಮಲದಿಂದ ತರಲಾಗಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ವಾಧ್ಯವೈಭವ, ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.

ಟಿಟಿಡಿ ಆಡಳಿತಾಧಿಕಾರಿಯು ಶೇಷವಸ್ತ್ರವನ್ನು ತಲೆ ಮೇಲೆ ಹೊತ್ತು ಮಠದ ಪ್ರಕಾರದಲ್ಲಿ ಪ್ರದಕ್ಷಣೆ ಮಾಡಿದರು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಬರಮಾಡಿಕೊಂಡು, ತಲೆಮೇಲಿಟ್ಟುಕೊಂಡು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು.

ADVERTISEMENT

ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಯಿತು.

ನಾಡಿನ ವಿವಿಧೆಡೆಯಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.