ADVERTISEMENT

ಮುಖಕ್ಕೆ ಮಾಸ್ಕ್, ಕೈ ಸ್ವಚ್ಛತೆಗೆ ಸ್ಯಾನಿಟೈಸರ್

ಪರಸ್ಪರ ಅಂತರ ಕಾಪಾಡಲು ಮದ್ಯದಂಗಡಿ ಮಾಲೀಕರ ಮನವಿ

​ಪ್ರಜಾವಾಣಿ ವಾರ್ತೆ
Published 5 ಮೇ 2020, 10:15 IST
Last Updated 5 ಮೇ 2020, 10:15 IST
ಮಾನ್ವಿಯಲ್ಲಿ ಸೋಮವಾರ ಎಂಎಸ್‍ಐಎಲ್ ಮಾರಾಟ ಮಳಿಗೆ ಮುಂದೆ ಮದ್ಯ ಖರೀದಿಗೆ ಸಾಲಾಗಿ ನಿಂತಿರುವ ಗ್ರಾಹಕರು
ಮಾನ್ವಿಯಲ್ಲಿ ಸೋಮವಾರ ಎಂಎಸ್‍ಐಎಲ್ ಮಾರಾಟ ಮಳಿಗೆ ಮುಂದೆ ಮದ್ಯ ಖರೀದಿಗೆ ಸಾಲಾಗಿ ನಿಂತಿರುವ ಗ್ರಾಹಕರು   

ಮಾನ್ವಿ: ಪಟ್ಟಣದ ಮದ್ಯ ಮಾರಾಟದ ಅಂಗಡಿಗಳಲ್ಲಿ ಸೋಮವಾರ ಮದ್ಯ ಮಾರಾಟ ಜೋರಾಗಿತ್ತು.

ಪಟ್ಟಣದ ಬಸವ ವೃತ್ತ ಸಮೀಪದ ಎಂಎಸ್‍ಐಎಲ್ ಮಾರಾಟ ಮಳಿಗೆ ಸೇರಿ 6 ಮದ್ಯದ ಅಂಗಡಿಗಳಲ್ಲಿ ಗ್ರಾಹಕರು ಮದ್ಯ ಖರೀದಿಸಿದರು. ಖರೀದಿಗೆ ಬರುವ ಗ್ರಾಹಕರ ನಡುವೆ ನೂಕು ನುಗ್ಗಲು ತಡೆಗಟ್ಟಲು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ ಸ್ಥಳ ಗುರುತು ಮಾಡಲಾಗಿತ್ತು.

ಬೆಳಿಗ್ಗೆ 9ರಿಂದಲೇ ಎಲ್ಲಾ ಅಂಗಡಿಗಳ ಮುಂದೆ ಗ್ರಾಹಕರು ಮದ್ಯ ಖರೀದಿಗಾಗಿ ಜಮಾಯಿಸಿದ್ದರು. ಗ್ರಾಹಕರು ಮದ್ಯ ಖರೀದಿಗಾಗಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಪಟ್ಟಣದ ಬ್ಲೂ ಡೈಮಂಡ್ ಲಿಕ್ಕರ್ಸ್ ಮದ್ಯದ ಅಂಗಡಿಯಲ್ಲಿ ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಒದಗಿಸಲಾಗಿತ್ತು. ಮದ್ಯ ಖರೀದಿಸಿದವರು ಪಟ್ಟಣದ ಹೊರವಲಯದ ಜಮೀನು ಹಾಗೂ ತೋಟಗಳ ಕಡೆಗೆ ತೆರಳುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.