ಮುದಗಲ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುದಗಲ್ ಘಟಕದ ನೂತನ ಪತ್ರಿಕಾ ಭವನದ ಕಚೇರಿಯನ್ನು ಶಾಸಕ ಮಾನಪ್ಪ ವಜ್ಜಲ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,‘ಪತ್ರಕರ್ತರು ವಸ್ತುನಿಷ್ಠವಾಗಿ ಸುದ್ದಿ ಮಾಡಬೇಕು. ಪತ್ರಿಕೆಗಳು ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು. ಚುನಾಯಿತ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಪ್ಪುಗಳನ್ನು ತೆರೆದಿಡುವ ಕೆಲಸ ಮಾಡಬೇಕು. ಪತ್ರಿಕಾ ಭವನ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹15 ಲಕ್ಷ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸದಸ್ಯರಾದ ಮೈಬೂಬ್‌ಸಾಬ್ ಕಡ್ಡಿಪುಡಿ, ಶೇಖ್ ರಸೂಲ್, ಬಿಜೆಪಿ ಮಂಡಲ ಅಧ್ಯಕ್ಷ ಕರಿಯಪ್ಪ ಯಾದವ, ಕಾಂಗ್ರೆಸ್ ಮುಖಂಡ ತಮ್ಮಣ್ಣ ಗುತ್ತೇದಾರ, ಅಹಿಂದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ ಕನ್ನಾಪುರಹಟ್ಟಿ, ಗದ್ದೆಪ್ಪ ಜಕ್ಕೇರಮಡು, ಫಕಿರಪ್ಪ ಕುರಿ, ರಾಘವೇಂದ್ರ ಕುದರಿ, ನಾಗರಾಜ ತಳವಾರ, ಎಸ್.ಎ.ನಯೀಮ್, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ದುರುಗಪ್ಪ ಕಟ್ಟಿಮನಿ ಪತ್ರಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.