ADVERTISEMENT

ಮಸ್ಕಿ ತಾಲ್ಲೂಕಿನಾದ್ಯಂತ ಮಳೆಯ ಅಬ್ಬರ: ಜಲಾಶಯದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:05 IST
Last Updated 15 ಸೆಪ್ಟೆಂಬರ್ 2025, 5:05 IST
<div class="paragraphs"><p>ಮಸ್ಕಿಯಲ್ಲಿ  ಮಹಾ ಮಳೆಗೆ ವಾರ್ಡ್ 1 ರ ಬಸವೇಶ್ವರ ನಗರದಲ್ಲಿ ನೀರು ನಿಂತು ಕೆರೆಯಂತೆ&nbsp;ಆಗಿರುವುದು</p><p></p></div>

ಮಸ್ಕಿಯಲ್ಲಿ ಮಹಾ ಮಳೆಗೆ ವಾರ್ಡ್ 1 ರ ಬಸವೇಶ್ವರ ನಗರದಲ್ಲಿ ನೀರು ನಿಂತು ಕೆರೆಯಂತೆ ಆಗಿರುವುದು

   

ಮಸ್ಕಿ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ತಾಲ್ಲೂಕಿನ ಮಸ್ಕಿ ಜಲಾಶಯದಿಂದ 600 ಕ್ಯೂಸೆಕ್ ನೀರನ್ನು ಹಿರೇ ಹಳ್ಳಕ್ಕೆ ಬಿಡಲಾಗಿದೆ. ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ದಂಡೆಯ ಗ್ರಾಮಗಳಿಗೆ ಹಳ್ಳದಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಸುರಿದ ಮಳೆಗೆ ಬೆಟ್ಟದಿಂದ ಹರಿದು ಬಂದ ನೀರು ಬಸವೇಶ್ವರ ನಗರಕ್ಕೆ ನುಗ್ಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ತಹಶೀಲ್ದಾರ್ ಕಚೇರಿ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿದೆ. ಬಸವೇಶ್ವರ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮುಂದೆ ಹರಿದು ಹೋಗದೆ ನಿಂತಲ್ಲಿಯೇ ನಿಂತಿದ್ದರಿಂದ ಸ್ಥಳೀಯ ನಿವಾಸಿಗಳು ಸೋಮವಾರ ಬೆಳಿಗ್ಗೆ ನಿತ್ಯದ ಕೆಲಸಗಳಿಗೆ ಪರದಾಡುವಂತಾಯಿತು. ಮನೆಗಳಿಂದ ಹೊರ ಬಾರದಂತ ವಾತಾವರಣ ನಿರ್ಮಾಣವಾಗಿತ್ತು

ಪುರಸಭೆಯ ಮುಖ್ಯಾಧಿಕಾರಿ ನರಸರೆಡ್ಡಿ ಸೂಚನೆಯಂತೆ ಸುನೀಲ್, ಹಜರ್ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮಳೆ ನೀರನ್ನು ತಾತ್ಕಾಲಿಕವಾಗಿ ಹೊರ ಕಳಿಸಲು ವ್ಯವಸ್ಥೆ ಮಾಡಿದರು.

ವಾಲ್ಮೀಕಿ ನಗರ, ಸೋಮನಾಥ ನಗರ, ಗಾಂಧಿ ನಗರ ಸೇರಿದಂತೆ ವಿವಿದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮಳೆಗಳಿಗೆ ನುಗ್ಗಿದ ಬಗ್ಗೆ ವರದಿಗಳು ಬಂದಿವೆ. ಹೆದ್ದಾರಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಪುರಸಭೆ ಸಿಬ್ಬಂದಿ ಚರಂಡಿಯ ಮೋರಿಗಳನ್ನು ತೆರವುಗೊಳಿಸಿ ಚರಂಡಿಗೆ ನೀರು ಹೋಗುವಂತೆ ಮಾಡಿದರು.

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಹಾನಿ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಬೋಗಾವತಿ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.