ADVERTISEMENT

ಮಸ್ಕಿ: ಖಬರಸ್ಥಾನಕ್ಕೆ ಜಾಗದ ಕೊರತೆ; ಮನೆಯಂಗಳದಲ್ಲೇ ಶವ ಸಂಸ್ಕಾರ!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
ಮಸ್ಕಿ ತಾಲ್ಲೂಕಿನ‌ ರಂಗಾಪೂರ ಗ್ರಾಮದ ಮುಸ್ಲಿಂ ಬಡಾವಣೆಯಲ್ಲಿ ಶವ ಹೂಳಲು ಜಾಗವಿಲ್ಲದೆ ಮನೆಯ ಅಂಗಳದಲ್ಲಿ ಶವ ಸಂಸ್ಕಾರ ಮಾಡಿದ್ದನ್ನು ತೋರಿಸುತ್ತಿರುವ ಸ್ಥಳೀಯ ಮುಸ್ಲಿಂ ಮುಖಂಡರು
ಮಸ್ಕಿ ತಾಲ್ಲೂಕಿನ‌ ರಂಗಾಪೂರ ಗ್ರಾಮದ ಮುಸ್ಲಿಂ ಬಡಾವಣೆಯಲ್ಲಿ ಶವ ಹೂಳಲು ಜಾಗವಿಲ್ಲದೆ ಮನೆಯ ಅಂಗಳದಲ್ಲಿ ಶವ ಸಂಸ್ಕಾರ ಮಾಡಿದ್ದನ್ನು ತೋರಿಸುತ್ತಿರುವ ಸ್ಥಳೀಯ ಮುಸ್ಲಿಂ ಮುಖಂಡರು   

ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ  ರಂಗಾಪೂರ ಗ್ರಾಮದ ಮುಸ್ಲಿಂ ಸಮಾಜದ ಬಡಾವಣೆಯಲ್ಲಿ ಯಾರೇ ಮೃತಪಟ್ಟರೂ ಅವರ ಮನೆ ಅಂಗಳದಲ್ಲೇ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ.

ಈ ಗ್ರಾಮದಲ್ಲಿ ಮುಸ್ಲಿಂ ಸಮಾಜಕ್ಕೆ ಸೇರಿದ 40 ಮನೆಗಳು ಇದ್ದು 200ರಷ್ಟು ಜನ ಇದ್ದಾರೆ. ಇವರಿಗೆ ಮನೆ ಮುಂದಿನ ಖಾಲಿ ಜಾಗ, ತೋಟವೇ ಶವ ಹೂಳಲು ಆಸರೆಯಾಗಿದೆ.

‘ಶವ ಹೊಳಲು ಖಬರಸ್ಥಾನಕ್ಕೆ ಜಾಗ ನೀಡುವಂತೆ ಹಲವಾರು ವರ್ಷಗಳಿಂದ ಮುಸ್ಲಿಂ ಸಮಾಜದವರು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಜಾಗ ಮುಂಜೂರಾಗಿಲ್ಲ’ ಎಂದು ಸ್ಥಳೀಯ ಅಮ್ಜದ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

Quote - ರಂಗಾಪೂರ ಗ್ರಾಮಕ್ಕೆ ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಮಂಜುನಾಥ ಬೋಗಾವತಿ ತಹಶೀಲ್ದಾರ್ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.