
ಮಸ್ಕಿ: ‘ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಬಂದಾಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾದ್ಯ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಪಟ್ಟಣದ ದೇವನಾಂಪ್ರಿಯ ಸರ್ಕಾರಿಪದವಿ ಕಾಲೇಜಿನಿಂದ ಒಂದು ವಾರಗಳ ಕಾಲ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ (ಎನ್‌ಎಸ್‌ಎಸ್)ದಲ್ಲಿ ಮಂಗಳವಾರ ಅವರು ಮಾತನಾಡಿದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ‘ಕೃತಕ ಬುದ್ಧಿಮತ್ತೆ ಆಧುನಿಕ ಜಗತ್ತಿನಲ್ಲಿ ಒಂದು ವರದಾನವಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಫಲಿತಾಂಶ ಅದ್ಭುತವಾಗಿರುತ್ತದೆ’ ಎಂದರು.
ಡಾ.ಶಿವಶರಣಪ್ಪ ಇತ್ಲಿ, ಪ್ರಾಂಶುಪಾಲ ಮಹಾಂತಗೌಡ ಪಾಟೀಲ, ಶಿವ ಗ್ಯಾನಪ್ಪ ಲಕ್ಕುಂದಿ ಮಾತನಾಡಿದರು. ಸಣ್ಣಪ್ಪ ನಾಯಕ ಸ್ವಾಗತಿಸಿದರು. ಇಮಾಮ್ ಸಾಬ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.