ADVERTISEMENT

ಶಿಕ್ಷಣಕ್ಕೆ ಬದುಕು ಬದಲಿಸುವ ಶಕ್ತಿ ಇದೆ: ಪ್ರಾಚಾರ್ಯ ಶೇಖರಯ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:52 IST
Last Updated 26 ಫೆಬ್ರುವರಿ 2026, 6:52 IST
ಸಿಂಧನೂರಿನ ಸತ್ಯಗಾರ್ಡನ್‍ನಲ್ಲಿ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಿಂದ  ಹಮ್ಮಿಕೊಂಡಿದ್ದ ದ್ವಿತೀಯ ಪಿಯು ಮತ್ತು ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಸಿಂಧನೂರಿನ ಸತ್ಯಗಾರ್ಡನ್‍ನಲ್ಲಿ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಿಂದ  ಹಮ್ಮಿಕೊಂಡಿದ್ದ ದ್ವಿತೀಯ ಪಿಯು ಮತ್ತು ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಸಿಂಧನೂರು: ‘ಕಾಲೇಜಿನಲ್ಲಿ ಪಡೆದ ಶಿಕ್ಷಣ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿದೆ. ನಿಮ್ಮ ಜೀವನವನ್ನು ರೂಪಿಸುವುದು ಶಿಕ್ಷಣ ಮಾತ್ರ’ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶೇಖರಯ್ಯ ಅಭಿಪ್ರಾಯಪಟ್ಟರು.

ನಗರದ ಸತ್ಯಗಾರ್ಡನ್‍ನಲ್ಲಿ ಎಲ್‍ಬಿಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ದ್ವಿತೀಯ ಪಿಯು, ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಗಡದಿನ್ನಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ, ರಾಯಚೂರಿನ ಡಯಟ್ ಯರಮರಸ್‍ನ ಉಪನ್ಯಾಸಕ ಕನಕಪ್ಪ ಚಿಕ್ಕಬೇರಿಗಿ ಮಾತನಾಡಿದರು.

ADVERTISEMENT

ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ‘ಇತಿಹಾಸ ಸಾಮ್ರಾಜ್ಯಗಳ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮೊದಲನೇ ಬಹುಮಾನ ನಟರಾಜ ತಂಡ, ಎರಡನೆಯ ಬಹುಮಾನ ಶಿವಾಜಿ ಛತ್ರಪತಿ ತಂಡ, ಮೂರನೇ ಬಹುಮಾನ ಸುವರ್ಣ ಯುಗ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪ್ರಾಂಶುಪಾಲೆ ಐಶ್ವರ್ಯ ದಳವಾಯಿ, ಉಪನ್ಯಾಸಕರಾದ ಪಂಚಾಕ್ಷರಿ, ಮೌಲಾಸಾಬ್ ಅವರನ್ನು ಸನ್ಮಾನಿಸಲಾಯಿತು.

ಬಸವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಪರಶುರಾಮ್ ಮಲ್ಲಾಪುರ, ಕಾರ್ಯದರ್ಶಿ ಅರುಣಕುಮಾರ ಬೇರಿಗಿ, ಉಪಾಧ್ಯಕ್ಷ ಶಂಕರಪ್ಪ ಪತ್ತಾರ, ಖಜಾಂಚಿ ಜಯಪ್ಪ ಗೊರಬಾಳ, ಪ್ರಾಚಾರ್ಯ ಶಿವಕುಮಾರ ಬಿಂಗಿ, ಡಾ.ಸವಿತಾ ಪಾಟೀಲ್, ರಂಗನಗೌಡ ಗೊರೇಬಾಳ ಉಪಸ್ಥಿತರಿದ್ದರು. ಕಾವೇರಿ ನಿರೂಪಿಸಿದರು. ಪಂಪಾಪತಿ ಸ್ವಾಗತಿಸಿದರು. ಅನ್ನಪೂರ್ಣ ವಂದಿಸಿದರು.

Highlights - ಪ್ರಾಚಾರ್ಯ ಶೇಖರಯ್ಯ, ಮುಖ್ಯಶಿಕ್ಷಕಿ ಗಿರಿಜಾ, ಡಯಟ್ ಉಪನ್ಯಾಸಕ ಕನಕಪ್ಪ ಚಿಕ್ಕಬೇರಿಗಿ, ಐಶ್ವರ್ಯ ದಳವಾಯಿ, ಉಪನ್ಯಾಸಕರಾದ ಪಂಚಾಕ್ಷರಿ, ಮೌಲಾಸಾಬ್, ಬಸವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಸಂಸ್ಥೆಯ ಅಧ್ಯಕ್ಷ ಪರಶುರಾಮ್ ಮಲ್ಲಾಪುರ, ಕಾರ್ಯದರ್ಶಿ ಅರುಣಕುಮಾರ ಬೇರಿಗಿ, ಉಪಾಧ್ಯಕ್ಷ ಶಂಕರಪ್ಪ ಪತ್ತಾರ, ಖಜಾಂಚಿ ಜಯಪ್ಪ ಗೊರಬಾಳ, ಪ್ರಾಚಾರ್ಯ ಶಿವಕುಮಾರ ಬಿಂಗಿ, ಸವಿತಾ ಪಾಟೀಲ, ರಂಗನಗೌಡ ಗೊರೇಬಾಳ, ಕಾವೇರಿ, ಪಂಪಾಪತಿ, ಅನ್ನಪೂರ್ಣ ಇದ್ದರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.